ಮೊಘಲರ ರಾಜ ಶೆಹಜಹಾನ್ನಿಂದ ನಿರ್ಮಾಣಗೊಂಡ ತಾಜ್ಮಹಲ್ ಪ್ರೀತಿಯ ಸಂಕೇತವಾಗಿದೆ. ಸುಪ್ರಸಿದ್ಧ ತಾಜ್ಮಹಲ್ನ್ನೇ ಹೋಲುವ ಮನೆಯೊಂದನ್ನು ಮಧ್ಯ ಪ್ರದೇಶದ ಬುರ್ಹಾನ್ಪುರದಲ್ಲಿ ನಿರ್ಮಾಣ ಮಾಡಲಾಗಿದೆ. ಶೆಹಜಹಾನ್ ತನ್ನ ಪತ್ನಿಯ ಮೇಲಿನ ಪ್ರೇಮದ ಸಂಕೇತವಾಗಿ ಈ ತಾಜ್ಮಹಲ್ನ್ನು ನಿರ್ಮಿಸಿದ್ದರೆ ಇಲ್ಲೊಬ್ಬ ವ್ಯಕ್ತಿಯು ತನ್ನ ಸಂಗಾತಿಗೆ ಉಡುಗೊರೆಯ ರೂಪದಲ್ಲಿ ಈ ತಾಜ್ಮಹಲ್ ಮಾದರಿಯ ಮನೆಯನ್ನು ನೀಡಿದ್ದಾರೆ .
ಬುರ್ಹಾನ್ಪುರ ನಿವಾಸಿಯಾದ ಆನಂದ್ ಚೋಕ್ಸೆ ಶೆಹಜಹಾನ್ ಪತ್ನಿ ಮುಮ್ತಾಜ್ ಬುರ್ಹಾನ್ಪುರದಲ್ಲೇ ಸಾವನ್ನಪ್ಪಿದ್ದರೂ ಸಹ ಯಾಕೆ ತಮ್ಮ ಊರಿನಲ್ಲಿ ತಾಜ್ಮಹಲ್ ನಿರ್ಮಾಣ ಮಾಡಿಲ್ಲ ಎಂದು ಎಂದಿಗೂ ಯೋಚಿಸುತ್ತಿದ್ದರಂತೆ. ಮೊದಲು ತಾಜ್ಮಹಲ್ನ್ನು ತಪ್ತಿ ನದಿಯ ದಡದಲ್ಲೇ ನಿರ್ಮಾಣ ಮಾಡೋದಾಗಿ ಪ್ಲಾನ್ ಮಾಡಿದ್ದರಂತೆ. ಬಳಿಕ ಆಗ್ರಾದಲ್ಲಿ ನಿರ್ಮಾಣ ಮಾಡುವ ಮನಸ್ಸು ಮಾಡಲಾಯ್ತು.
4 ಮಲಗುವ ಕೋಣೆಯನ್ನು ಹೊಂದಿರುವ ಈ ತಾಜ್ ಮಹಲ್ ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಮೂರು ವರ್ಷ ತೆಗೆದುಕೊಳ್ಳಲಾಗಿದೆ.
ಈ ಮನೆಯನ್ನು ನಿರ್ಮಾಣ ಮಾಡಲು ಇಂಜಿನಿಯರ್ಗಳಿಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಅವರು ನಿಜವಾದ ತಾಜ್ಮಹಲ್ನ್ನು ತುಂಬಾ ಗಾಢವಾಗಿ ಅಧ್ಯಯನ ಮಾಡಿದ್ದರು. ಬಂಗಾಳ ಹಾಗೂ ಇಂದೋರ್ನ ಕಲಾವಿದರ ಸಹಾಯವನ್ನು ಪಡೆದು ಈ ತಾಜ್ ಮಹಲ್ ಮನೆಯನ್ನು ನಿರ್ಮಿಸಲಾಗಿದೆ.
ಇಲ್ಲಿ ದೊಡ್ಡ ಹಾಲ್, ಕೆಳಗಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ , ಮೇಲಿನ ಅಂತಸ್ತಿನಲ್ಲಿ 2 ಮಲಗುವ ಕೋಣೆ, 1 ಲೈಬ್ರರಿ ಹಾಗೂ ಒಂದು ಪ್ರಾರ್ಥನಾ ಮಂದಿರವನ್ನು ಇಡಲಾಗಿದೆ. ಈ ಮನೆಯ ಲೈಟಿಂಗ್ ವ್ಯವಸ್ಥೆ ಯಾವ ರೀತಿ ಮಾಡಲಾಗಿದೆ ಅಂದರೆ ಅದು ರಾತ್ರಿ ವೇಳೆ ತಾಜ್ಮಹಲ್ನಂತೆಯೇ ಪ್ರಜ್ವಲಿಸುತ್ತದೆ.