
ತನ್ನ ಒಡಹುಟ್ಟಿದವಳನ್ನು ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಲು ಮುಂದಾದ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಖುದ್ದು ತಾವೇ ಸೀರೆಯುಟ್ಟುಕೊಂಡು ಹೋಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಕಂಠಪೂರ್ತಿ ಕುಡಿದಿದ್ದಾನೆ.
ಇಲ್ಲಿನ ನಯಾ ಗ್ರಾಮದವರಾದ ಸೋನು ರಂಗಭೂಮಿ ಕಲಾವಿದರಾಗಿದ್ದು, ನಾಟಕಗಳಲ್ಲಿ ಹೆಣ್ಣಿನ ಪಾತ್ರಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. ತನ್ನ ಸಹೋದರಿಗೆ ಕಿರುಕುಳ ಕೊಟ್ಟ ಮಿಟ್ಠು ಲಾಲ್ ಭಿಲ್ ಎಂಬಾತನಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ
ಇಬ್ಬರೂ ಬೈಕ್ ಏರಿ ಹೊರಟು ಚೆನ್ನಾಗಿ ಕುಡಿದ ಪರಿಣಾಮ ಪರಿಜ್ಞಾನ ಕಳೆದುಕೊಂಡಿದ್ದಾರೆ. ಇದರಿಂದ ಸೋನು ಪ್ಲಾನ್ ದಾರಿ ತಪ್ಪಿ, ಇಬ್ಬರನ್ನೂ ಕಳ್ಳರೆಂದು ಭಾವಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಮನನೊಂದು ರಾಜೀನಾಮೆ ನೀಡಲು ನಿರ್ಧರಿಸಿದ್ದೆ: ಆದರೆ……. ರಮೇಶ್ ಜಾರಕಿಹೊಳಿ ಹೇಳಿಕೆ
ಇಬ್ಬರನ್ನೂ ಕಳ್ಳರೆಂದು ಅನುಮಾನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅದಕ್ಕೂ ಮುನ್ನ ಇಬ್ಬರನ್ನೂ ಹಿಡಿದುಕೊಳ್ಳಲು ಮುಂದಾದ ಗ್ರಾಮಸ್ಥರು ಸೋನುವನ್ನು ಹಿಡಿದುಕೊಂಡರೆ, ಮಿಟ್ಠು ಲಾಲ್ ಅಲ್ಲಿಂದ ನಾಪತ್ತೆಯಾಗಿ ಅಲ್ಲಿಯೇ ಪೊದೆಯೊಳಗೆ ಬಚ್ಚಿಕೊಂಡಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಪ್ರಶ್ನಿಸಿದ ಬಳಿಕ ಸತ್ಯವೇನೆಂದು ಗೊತ್ತಾಗಿದೆ.