ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ, ಇಬ್ಬರು ಆರೋಪಿಗಳಾದ ಶಿವ ನಾರಾಯಣ್ ಪಾಂಡೆ ಮತ್ತು ಆತನ ಸ್ನೇಹಿತ ದೇವೇಂದ್ರ ಪಾಂಡೆ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಶಿವ ನಾರಾಯಣ್ ಭದ್ರತಾ ಏಜೆನ್ಸಿಯ ಮಾಲೀಕರಾಗಿದ್ದು, ಅವರ ಸ್ನೇಹಿತ ದೇವೇಂದ್ರ ರೇವಾ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಇಬ್ಬರು ಸ್ನೇಹಿತರು ಭದ್ರತಾ ಸಿಬ್ಬಂದಿಯ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, ಶಿವ ನಾರಾಯಣ್ ಅವರು ಮನೆಯ ಸಹಾಯಕರಾಗಿ ಕೆಲಸ ಮಾಡಲು ಭದ್ರತಾ ಸಿಬ್ಬಂದಿಯ ಪತ್ನಿಯನ್ನು ನೇಮಿಸಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಕೆ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದಾನೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ವಿಡಿಯೋ ಕ್ಲಿಪ್ ಬಳಸಿದ್ದಾನೆ. ಆ ಬಳಿಕ ಆರೋಪಿಗಳು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
ಭಾನುವಾರ ದೇವೇಂದ್ರ ಅವರು ಫಾರ್ಮ್ಹೌಸ್ಗೆ ಭೋಜನಕ್ಕೆ ಭೇಟಿ ನೀಡಿದ್ದರು. ಶಿವ ನಾರಾಯಣ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ನೋಡಿದ್ದಾರೆ. ನಂತರ, ನಿವೃತ್ತ ಪ್ರಾಧ್ಯಾಪಕ ಕೂಡ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಮಹಿಳೆ ತನ್ನ ಗಂಡನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ.