alex Certify ತುಪ್ಪ ಖರೀದಿಸುವ ಮುನ್ನ ಹುಷಾರ್​….! ಅವಧಿ ಮೀರಿದ ತುಪ್ಪವನ್ನು ಹೀಗೂ ಮಾರಾಟ ಮಾಡ್ತಾರೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಪ್ಪ ಖರೀದಿಸುವ ಮುನ್ನ ಹುಷಾರ್​….! ಅವಧಿ ಮೀರಿದ ತುಪ್ಪವನ್ನು ಹೀಗೂ ಮಾರಾಟ ಮಾಡ್ತಾರೆ…..!

ಮಧ್ಯ ಪ್ರದೇಶದ ಇಂದೋರ್​ನಲ್ಲಿ ಕಾರ್ಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 4200 ಕೆಜಿ ತೂಕದ ಕಳಪೆ ಗುಣಮಟ್ಟದ ತುಪ್ಪವನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೂಕ್ತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಭನ್ವಾರ್ಕುವಾನ್​​ ಪ್ರದೇಶದಲ್ಲಿರುವ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಅವಧಿ ಮೀರಿದ ತುಪ್ಪದ ಬಾಟಲಿಗಳನ್ನು ಇಲ್ಲಿ ಹೊಸ ಬ್ರ್ಯಾಂಡ್ ಹೆಸರು ನೀಡಿ ಮರು ಪ್ಯಾಕಿಂಗ್​ ಮಾಡಲಾಗುತ್ತಿತ್ತು.

ಗುಜರಾತ್​ ಹಾಗೂ ಮಹಾರಾಷ್ಟ್ರದಲ್ಲಿ ಕಳಪೆ ಗುಣಮಟ್ಟದ ತುಪ್ಪವನ್ನು ಕಡಿಮೆ ಬೆಲೆಗೆ ಖರೀದಿಸಿದ್ದ ಕಾರ್ಖಾನೆ ಮಾಲೀಕರು ಇವುಗಳಿಗೆ ಹೊಸ ಬ್ರ್ಯಾಂಡ್​ ಹೆಸರು ನೀಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕಾರ್ಖಾನೆ ಮಾಲೀಕರಾದ ನರೇಂದ್ರ ಗುಪ್ತಾ ಹಾಗೂ ಮಂಜು ಅಗರ್​ವಾಲ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...