ಡಿಆರ್‌ಸಿಯ ಸೆಂಕ್‌ವೆಕ್ವೆ ಸೆಂಟರ್‌ನಲ್ಲಿ ಬೆಳೆದ ಎನ್‌ಡಕಾಸಿ ಮತ್ತು ಎಂಡೀಜೆ ಎಂಬ ಹೆಣ್ಣು ಗೊರಿಲ್ಲಾಗಳ ಜೊತೆ ರೇಂಜರ್ ಗಳು ತೆಗೆದಿದ್ದ ಸೆಲ್ಫಿ, ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ದುರದೃಷ್ಟವಶಾತ್, ದೀರ್ಘಕಾಲದ ಅನಾರೋಗ್ಯದ ನಂತರ ಸೆಪ್ಟೆಂಬರ್ 26 ರಂದು ಎನ್‌ಡಕಾಸ್ಕಿ ಗೊರಿಲ್ಲಾ ತನ್ನ 14ನೇ ವಯಸ್ಸಿನಲ್ಲಿ ಮೃತಪಟ್ಟಿದೆ ಎಂದು ಪಾರ್ಕ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದೆ.
“ಒಂದು ದಶಕಕ್ಕೂ ಹೆಚ್ಚು ಕಾಲ ಪಾರ್ಕ್‌ನ ಸೆಂಕ್‌ವೆಕ್ವೆ ಸೆಂಟರ್‌ನ ಆರೈಕೆಯಲ್ಲಿದ್ದ ಪ್ರೀತಿಯ ಅನಾಥ ಪರ್ವತ ಗೊರಿಲ್ಲಾ, ಎಂಡಕಾಸಿಯ ಸಾವನ್ನು ವಿರುಂಗಾ ದುಃಖದಿಂದ ಘೋಷಿಸಿದೆ” ಎಂದು ಪಾರ್ಕ್ ತಿಳಿಸಿದೆ.
ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ
“26 ಸೆಪ್ಟೆಂಬರ್ ಸಂಜೆ, ದೀರ್ಘಕಾಲದ ಅನಾರೋಗ್ಯದ ನಂತರ, ಆಕೆಯ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಎಂಡಕಾಸಿ ತನ್ನನ್ನು ನೋಡಿಕೊಳ್ಳುತ್ತಿದ್ದ ಮತ್ತು ಜೀವಮಾನದ ಸ್ನೇಹಿತ, ಪ್ರೀತಿಯ ಆಂಡ್ರೆ ಬೌಮಾರ ತೋಳುಗಳಲ್ಲಿ ತನ್ನ ಉಸಿರು ನಿಲ್ಲಿಸಿದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಪ್ರಸಿದ್ಧ ಸೆಲ್ಫಿಯಲ್ಲಿ ಕಾಣಿಸಿಕೊಂಡ ಗೋರಿಲ್ಲಾ ತನ್ನ ಆರೈಕೆದಾರ ಆಂಡ್ರೆ ಬೌಮಾ ಅವರ ಎದೆಗೆ ಒರಗಿ ಮಲಗಿರುವ ಹೃದಯ ವಿದ್ರಾವಕ ಫೋಟೋವನ್ನು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಕೂಡ ತುಂಬಾ ದುಃಖಿತರಾಗಿ ಪ್ರತಿಕ್ರಿಯಿಸಿದ್ದಾರೆ.