ಸ್ಮಾರ್ಟ್ ಫೋನ್ ಗಳಿಂದ ಏನೆಲ್ಲಾ ಜೀವನಾವಶ್ಯಕ ಕೆಲಸಗಳಾಗುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವಂಥದ್ದೇ. ಆದರೆ ಸ್ಮಾರ್ಟ್ ಫೋನ್ ನಿಮ್ಮ ಜೀವವನ್ನೇ ಉಳಿಸುವ ಕವಚದಂತೆಯೂ ಕೆಲಸ ಮಾಡಬಲ್ಲದು ಎಂದು ಊಹಿಸಲು ಸಾಧ್ಯವೇ ? ಮೋಟರೋಲಾ ಜಿ5 ಫೋನ್ ಮಾಲೀಕರೊಬ್ಬರಿಗೆ ಇದೇ ಅನುಭವವಾಗಿದೆ.
ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ
ಡಕಾಯಿತರು ಹಾರಿಸಿದ ಗುಂಡಿನಿಂದ ಈ ಸ್ಮಾರ್ಟ್ ಫೋನ್ ತನ್ನ ಮಾಲೀಕನನ್ನು ರಕ್ಷಿಸಿದೆ.
ಐದು ವರ್ಷಗಳ ಹಿಂದೆ ಈ ಸ್ಮಾರ್ಟ್‌ಫೋನ್ ಖರೀದಿಸಿದ್ದ ಮಾಲೀಕ ತನ್ನ ಗ್ಯಾಜೆಟ್ ಒಂದು ದಿನ ತನ್ನ ಜೀವವನ್ನೇ ಉಳಿಸಬಲ್ಲದು ಎಂದು ಈತ ಕನಸಿನಲ್ಲೂ ಎಣಿಸಿರಲಿಲ್ಲ. ಫೋನ್‌ನ ಕೇಸ್‌ನಲ್ಲಿ ’ಇಂಕ್ರೆಡಿಬಲ್ ಹಲ್ಕ್’ ಚಿತ್ರವಿದ್ದು, ಆ ಕೇಸ್ ಖುದ್ದು ’ಹಲ್ಕ್’ ಆಗಿ ಈತನ ಜೀವ ಉಳಿಸಿದೆ.
ಈ ಕಲಾವಿದ ರಚಿಸಿರುವ ವಿಶಿಷ್ಟ ಕಲಾಕೃತಿ ನೋಡಿದ್ರೆ ನೀವೂ ಬೆರಗಾಗ್ತೀರಾ….!
ಬ್ರೆಜಿಲ್‌ನಲ್ಲಿ ಘಟನೆ ಜರುಗಿದ್ದು, ಡಕಾಯಿತಿಯಲ್ಲಿ ನಿರತರಾಗಿದ್ದ ಡಕಾಯಿತರು ಫೈರ್ ಮಾಡಿದ ಗುಂಡಿಗೆ ಬಲಿಯಾಗಲಿದ್ದ ಈತನ ಜೇಬಿನಲ್ಲಿದ್ದ ಮೋಟರೋಲಾ ಪೋನ್ ಕವಚದಂತೆ ಕೆಲಸ ಮಾಡಿದೆ. ಸ್ಮಾರ್ಟ್ ಫೋನ್‌ಗೆ ಬಡಿದು ಆತನ ಸೊಂಟಕ್ಕೆ ಸವರಿಕೊಂಡು ಹೋದ ಗುಂಡಿನಿಂದ ಆತನಿಗೆ ಮಾರಣಾಂತಿಕ ಪರಿಣಾಮವೇನೂ ಆಗಿಲ್ಲ.
ʼನಾಲ್ವರು ಮಕ್ಕಳು…. ನಾಲ್ಕು ಜಿಲ್ಲೆʼ…..! ಸೋಲದೇವನಹಳ್ಳಿ ಮಕ್ಕಳ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ಮಂಗಳೂರು ಡಿಸಿಪಿ
ಗುಂಡಿನ ಏಟಿನಿಂದ ಫೋನ್‌ನ ಸ್ಕ್ರೀನ್ ಛಿದ್ರವಾಗಿದೆ. ಇತ್ತೀಚಿನ ಬಹುತೇಕ ಸ್ಮಾರ್ಟ್ ಫೋನ್‌ಗಳಿಗೆ ಹೋಲಿಸಿದರೆ ಮೋಟೋ ಜಿ5ನ ಬಾಡಿ ಹೆಚ್ಚು ಮಂದವಾಗಿದೆ.