alex Certify ಕಾರ್ ಗೆ ಡಿಕ್ಕಿ ಹೊಡೆದು ಟಾಪ್ ಮೇಲೆ ಹಾರಿಬಿದ್ದ ಬೈಕ್ ಸವಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಗೆ ಡಿಕ್ಕಿ ಹೊಡೆದು ಟಾಪ್ ಮೇಲೆ ಹಾರಿಬಿದ್ದ ಬೈಕ್ ಸವಾರ

ಮೋಟಾರ್‌ ಸೈಕಲ್ ಮತ್ತು ಎಸ್‌ಯುವಿ ಪರಸ್ಪರ ಡಿಕ್ಕಿ ಹೊಡೆದ ನಂತರ ಮೋಟಾರ್‌ ಸೈಕ್ಲಿಸ್ಟ್ ಎಸ್‌ಯುವಿಯ ಛಾವಣಿಯ ಮೇಲೆ ಹಾರಿ ಬಿದ್ದ ಅಪಘಾತ ಪ್ರಕರಣ ದಕ್ಷಿಣ ಚೀನಾದಲ್ಲಿ ನಡೆದಿದೆ.

ಡಿಸೆಂಬರ್ 20 ರಂದು ನಡೆದಿರುವ ಘಟನೆಯ ವೀಡಿಯೊದಲ್ಲಿ, ಕಾರು ಬಲ ತಿರುವು ಮಾಡುತ್ತಿದ್ದಾಗ ಮೋಟಾರ್ ಬೈಕ್ ಬಂದು ಎಸ್‌ಯುವಿಯ ಬಲ ಬಾಗಿಲಿಗೆ ಬಡಿದಿದೆ. ಮೋಟಾರ್ ಬೈಕ್ ತಕ್ಷಣವೇ ಉರುಳಿಬಿದ್ದಿದ್ದು, ಬೈಕ್ ಚಾಲಕ ಕಾರಿನ ಛಾವಣಿಯ ಮೇಲೆ ಬಿದ್ದಿದ್ದಾನೆ. ಅಪಘಾತದ ವೇಳೆ ಕಾರ್ ನ ಬಲಭಾಗದ ಬಾಗಿಲು ಹಾಳಾಗಿದೆ.

ದ್ವಿಚಕ್ರವಾಹನದ ಮುಂಭಾಗ ತೀವ್ರವಾಗಿ ಹಾನಿಗೊಳಗಾಗಿದ್ದು, ಅವಶೇಷಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. . ಗುವಾಂಗ್ಕ್ಸಿ ಪ್ರಾಂತ್ಯದ ಲಿಯುಝೌ ನಗರದಲ್ಲಿನಡೆದಿರುವ ಅಪಘಾತ ಘಟನೆ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...