ಕೊರೊನಾ ಭಯ ಮತ್ತೆ ಹೆಚ್ಚಾಗ್ತಿದೆ. ಕೊರೊನಾಕ್ಕೆ ಲಸಿಕೆ ಮದ್ದು ಎನ್ನಲಾಗಿದೆ. ಅನೇಕ ದೇಶಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಆದ್ರೆ ನವಜಾತ ಶಿಶುಗಳ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಿಸುವುದು ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈಗ ನೆಮ್ಮದಿ ಸುದ್ದಿ ಸಿಕ್ಕಿದೆ.
ಕೆಲ ದಿನಗಳ ಹಿಂದಷ್ಟೆ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಲಸಿಕೆ ಹಾಕಿಕೊಳ್ಳಲು ಅನುಮತಿ ನೀಡಲಾಗಿದೆ. ಇತ್ತೀಚಿನ ಸಂಶೋಧನೆಯು, ಲಸಿಕೆ ತೆಗೆದುಕೊಂಡ ತಾಯಂದಿರುವ ನೆಮ್ಮದಿಯಾಗಿ ಸ್ತನ್ಯಪಾನ ಮಾಡಬಹುದು ಎಂದಿದೆ. ಮಹಿಳೆಯರ ಹಾಲು, ನವಜಾತ ಶಿಶುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದು ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಫ್ಲೋರಿಡಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಜೋಸೆಫ್ ಲಾರ್ಕಿನ್, ಎದೆ ಹಾಲಿನಲ್ಲಿ SARS-CoV-2 ವಿರುದ್ಧ ವ್ಯಾಕ್ಸಿನೇಷನ್ ಪ್ರತಿಕಾಯ ಉತ್ಪಾದನೆಯಾಗುತ್ತದೆ ಎಂಬುದು ಕಂಡು ಬಂದಿದೆ ಎಂದಿದ್ದಾರೆ.
ಈ ಅಧ್ಯಯನದ ಸಹ ಲೇಖಕರಾದ ಜೋಸೆಫ್, ನವಜಾತ ಶಿಶುಗಳು, ಸೋಂಕಿನ ವಿರುದ್ಧ ಹೋರಾಡುವುದು ಕಷ್ಟಕರ. ಬೆಳವಣಿಗೆಯ ಈ ನಿರ್ಣಾಯಕ ಸಮಯದಲ್ಲಿ ಎದೆ ಹಾಲು ಮಕ್ಕಳಿಗೆ ಉತ್ತಮ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ.