ಕೋವಿಡ್-19 ಸೋಂಕಿನಿಂದ ಆದ ಪ್ರಾಣಹಾನಿಯ ಅಂಕಿಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, 2021ರಲ್ಲೇ ಈ ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ 33 ಲಕ್ಷದಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್‌ನಿಂದ 2021ರಲ್ಲಿ ಘಟಿಸಿದ ಸಾವುಗಳು, ಎಚ್‌ಐವಿ, ಮಲೇರಿಯಾ ಮತ್ತು ಟಿಬಿಗಳಿಂದ ಮೃತಪಟ್ಟವರ ಒಟ್ಟಾರೆ ಸಂಖ್ಯೆಗಿಂತಲೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇದೇ ವೇಳೆ ತಿಳಿಸಿದೆ.
ನವೆಂಬರ್ 2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜಗತ್ತಿನಾದ್ಯಂತ ಕಳೆದ ವರ್ಷದಲ್ಲಿ ಎಚ್‌ಐವಿಯಿಂದ 6,80,000 ಮಂದಿ ಮೃತಪಟ್ಟರೆ, 1.5 ದಶಲಕ್ಷ ಮಂದಿಗೆ ಈ ಸೋಂಕು ತಗುಲಿದೆ. ಮಲೇರಿಯಾದಿಂದ 4,00,000 ಮಂದಿ ಪ್ರತಿ ವರ್ಷ ಸಾಯುತ್ತಿದ್ದಾರೆ.
ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿದೆ ಟಿಪ್ಸ್
ಇದೇ ವೇಳೆ, ತುರ್ತು ಬಳಕೆ ಪಟ್ಟಿಯಲ್ಲಿನ ಲಸಿಕೆಗಳಲ್ಲಿ ಆದರ್ ಪೂನಾವಾಲಾರ ಸೀರಂ ಇನ್ಸ್‌ಟಿಟ್ಯೂಟ್ ಇಂಡಿಯಾದ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಥಾನಮಾನ ನೀಡಿದೆ. ಭಾರತದಲ್ಲಿ ಇದುವರೆಗೂ ಕಂಡು ಬಂದ ಒಮಿಕ್ರಾನ್ ಸೋಂಕಿತರ ಸಂಖ್ಯೆ 200 ದಾಟಿದೆ.
ಒಮಿಕ್ರಾನ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಎರಡು ಕಟ್ಟುನಿಟ್ಟಿನ ಕ್ರಮಗಳಾದ – ಹಾಲಿಡೇ ಪ್ಲಾನ್ ರದ್ದು ಪಡಿಸುವುದು ಮತ್ತು ಲಸಿಕಾಕರಣದಲ್ಲಿ ಆಗುತ್ತಿರುವ ಅಸಮತೋಲ ಕೊನೆಗಾಣಿಸುವುದನ್ನು ಅಳವಡಿಸಿಕೊಳ್ಳುವುದು ಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.