alex Certify 1.5 ಕೋಟಿಗೂ ಅಧಿಕ ಭಾರತೀಯರಿಂದ ರಾಷ್ಟ್ರ ಗೀತೆ ಹಾಡಿದ ವಿಡಿಯೋ ಅಪ್ಲೋಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.5 ಕೋಟಿಗೂ ಅಧಿಕ ಭಾರತೀಯರಿಂದ ರಾಷ್ಟ್ರ ಗೀತೆ ಹಾಡಿದ ವಿಡಿಯೋ ಅಪ್ಲೋಡ್

ನವದೆಹಲಿ: ವಿಶ್ವದಾದ್ಯಂತ 1.5 ಕೋಟಿಗೂ ಹೆಚ್ಚು ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದ್ದಾರೆ.

‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಹಲವಾರು ಮಂದಿ ತಮ್ಮ ಸಂತೋಷದ ಭಾಗವಹಿಸುವಿಕೆಯನ್ನು ಘೋಷಿಸಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಪಂಚದಾದ್ಯಂತ ಭಾರತೀಯರು ‘ಜನ ಗಣ ಮನ’ ಹಾಡುವ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಹೊಸ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾದರು.

ಸಂಸ್ಕೃತಿ ಸಚಿವಾಲಯದ ಪ್ರಕಾರ, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿಂದೆಂದೂ ಮಾಡದ ದಾಖಲೆಯನ್ನು ದಾಖಲಿಸಲಾಗಿದೆ. ಇದು ಭಾರತದ ಅಂತರ್ಗತ ಏಕತೆ, ಶಕ್ತಿ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿದೆ.

“ಖ್ಯಾತ ಕಲಾವಿದರು, ಪ್ರಖ್ಯಾತ ವಿದ್ವಾಂಸರು, ಉನ್ನತ ನಾಯಕರು, ಹಿರಿಯ ಅಧಿಕಾರಿಗಳು, ಸೈನಿಕರು, ಪ್ರಸಿದ್ಧ ಕ್ರೀಡಾಪಟುಗಳು ಹಾಗೂ ಜನರು ಕೂಡ ರಾಷ್ಟ್ರಗೀತೆ ಹಾಡಿದ್ದಾರೆ. ಸಾವಿರಾರು ಮೈಲುಗಳ ದೂರದಲ್ಲಿರುವ, ಪ್ರಪಂಚದ ಮೂಲೆ-ಮೂಲೆಯಲ್ಲಿರುವ ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿದಾಗ, ಅವರ ಧ್ವನಿಯು ಭಾರತದ ನೂರ ಮೂವತ್ತಾರು ಕೋಟಿ ನಾಗರಿಕರ ಹೆಮ್ಮೆಯನ್ನು ಸಾರಿದೆ” ಎಂದು ಸಚಿವಾಲಯ ತಿಳಿಸಿದೆ.

“ರಾಷ್ಟ್ರಗೀತೆ ನಮ್ಮ ಹೆಮ್ಮೆಯ ಸಂಕೇತ. ಈ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮವು ಎಲ್ಲರಲ್ಲೂ ಉತ್ಸಾಹವನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ಇಡೀ ವಿಶ್ವವು ಭಾರತದ ಏಕತೆಯ ಸಂದೇಶವನ್ನು ಪಡೆದುಕೊಂಡಿದೆ” ಎಂದು ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...