alex Certify ಭಾರತದಲ್ಲಿ ಮಿತಿಮೀರಿದ ನಕಲಿ ಸೋಶಿಯಲ್​ ಮೀಡಿಯಾ ಖಾತೆದಾರರ ಹಾವಳಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಮಿತಿಮೀರಿದ ನಕಲಿ ಸೋಶಿಯಲ್​ ಮೀಡಿಯಾ ಖಾತೆದಾರರ ಹಾವಳಿ..!

ದುರುದ್ದೇಶಪೂರಿತ ಹಾಗೂ ಹಾನಿಕಾರಕ ಚಟುವಟಿಕೆಗಳನ್ನ ನಡೆಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫ್ರೊಫೈಲ್​ಗಳನ್ನ ಸೃಷ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರ್ತಿದೆ ಎಂದು ಹೊಸ ವರದಿಯೊಂದು ಹೇಳಿದೆ.

ತಮ್ಮ ಗುರುತನ್ನ ಮರೆಮಾಚಬಯಸುವ ಭಾರತೀಯ ಬಳಕೆದಾರರು ಫೇಸ್​ಬುಕ್​ನಲ್ಲಿ ಶೇ. 76, ಯುಟ್ಯೂಬ್​ನಲ್ಲಿ ಶೇಕಡ 60 , ಇನ್ಸ್​ಟಾಗ್ರಾಂನಲ್ಲಿ 47 ಶೇಕಡ, ಹಾಗೂ ಟ್ವಿಟರ್​ನಲ್ಲಿ 28 ಶೇಕಡದಷ್ಟರ ಮಟ್ಟಿಗೆ ನಕಲಿ ಖಾತೆಗಳನ್ನ ಸೃಷ್ಟಿಸಿದ್ದಾರೆ ಎಂದು ಜಾಗತಿಕ ಸೈಬರ್​ ಸೆಕ್ಯೂರಿಟಿ ಕಂಪನಿ ಕ್ಯಾಸ್ಪಸ್ರ್ಕಿ ಆಘಾತಕಾರಿ ಮಾಹಿತಿಯನ್ನ ನೀಡಿದೆ.
ಸಮೀಕ್ಷೆಯ ಪ್ರಕಾರ, ಈ ನಕಲಿ ಖಾತೆಯನ್ನ ಹೊಂದಿರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ಪ್ರತಿಷ್ಠೆಗೆ ಯಾವುದೇ ಧಕ್ಕೆಯಾಗಬಾರದೆಂಬ ಕಾರಣಕ್ಕೆ ನಕಲಿ ಪ್ರೊಫೈಲ್​ ಸೃಷ್ಟಿ ಮಾಡಿ, ಅದರಲ್ಲಿ ತಮ್ಮ ವಾಕ್​ ಸ್ವಾತಂತ್ರ್ಯವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಶೇಕಡ 53 ರಷ್ಟು ಮಂದಿ ತಮ್ಮ ಸ್ನೇಹಿತರ ಜೊತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆರೆಯಲು ಆಸಕ್ತಿ ಇಲ್ಲದ ಕಾರಣ ರಹಸ್ಯ ಕಾಪಾಡಲು ನಕಲಿ ಖಾತೆ ಹೊಂದಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...