ಬೆಂಗಳೂರು: ಬುರ್ಖಾಧಾರಿ ಮಹಿಳೆಗೆ ಡ್ರಾಪ್ ನೀಡಿದ್ದ ಬೈಕ್ ಸವಾರನ ಮೇಲೆ ಹಲ್ಲೆ ಹಾಗೂ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಪೊಲೀಸರು ಇಬ್ಬರ ವಿರುದ್ಧ 7 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಸೊಹೇಲ್ ಹಾಗೂ ನಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಮೇರೆಗೆ 7 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ
ಐಪಿಸಿ ಸೆಕ್ಷನ್ 153(a) -ಉದ್ದೇಶಪೂರ್ವಕವಾಗಿ ಎರಡು ಧರ್ಮಗಳ ನಡುವೆ ದ್ವೇಷ, ಸೆಕ್ಷನ್ 506- ಜೀವ ಬೆದರಿಕೆ, 341- ಅಕ್ರಮ ತಡೆ, 34-ಉದ್ದೇಶಪೂರ್ವಕ ಜನರಿಗೆ ನೋವುಂಟು ಮಾಡುವುದು, 504-ಮಾನಹಾನಿ, 323- ಮನಸ್ಸಿಗೆ ಘಾಸಿ ಹಾಗೂ 354- ಮಹಿಳೆ ಮೇಲೆ ದೌರ್ಜನ್ಯರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.