alex Certify Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ

ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ.

ಏಪ್ರಿಲ್​ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ 1 ಪ್ರತಿಶತ ಮಾದರಿಗಳಲ್ಲಿ AY.4 ತಳಿ ಕಂಡು ಬಂದಿದೆ. ಜುಲೈನಲ್ಲಿ 2 ಪ್ರತಿಶತ ಹಾಗೂ ಆಗಸ್ಟ್​ ತಿಂಗಳ ವೇಳೆಗೆ ಈ ಹೊಸ ತಳಿಯ ಪ್ರಮಾಣವು 44 ಪ್ರತಿಶತಕ್ಕೆ ಏರಿಕೆಯಾಗಿದೆ.

ಆಗಸ್ಟ್​ ತಿಂಗಳಲ್ಲಿ 308 ಸ್ಯಾಂಪಲ್​ಗಳ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ 137 ಸ್ಯಾಂಪಲ್​ಗಳು AY.4 ತಳಿಗೆ ಸೇರಿವೆ ಎಂದು ತಿಳಿದುಬಂದಿದೆ.

ಕಳೆದ ವಾರವಷ್ಟೇ ಪೂರ್ಣಗೊಂಡ ಜೆನೋಮಿಕ್​ ಸಿಕ್ವೆನ್ಸಿಂಗ್​ ಸರಣಿಗಳಲ್ಲಿ AY.4 ಸೇರಿದಂತೆ ಡೆಲ್ಟಾ ರೂಪಾಂತರಿಯ ಸಾಕಷ್ಟು ತಳಿಗಳು ಪತ್ತೆಯಾಗಿವೆ. ಡೆಲ್ಟಾ ಹಾಗೂ ಅದರ ತಳಿಗಳು ಈ ಹಿಂದೆ ಡೆಲ್ಟಾ ಪ್ಲಸ್​ ಎಂದು ಕರೆಯಲಾಗುತ್ತಿತ್ತು. ಇವುಗಳನ್ನು ಪ್ರತ್ಯೇಕ ರೂಪಾಂತರಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ರೂಪಾಂತರಿಯು ಹೆಚ್ಚಿನ ಪ್ರಮಾಣದಲ್ಲಿ ಸೋಂಕನ್ನು ಹರಡುತ್ತಿದ್ದರೆ ನಿಜಕ್ಕೂ ಅದೊಂದು ಆತಂಕಕಾರಿ ವಿಚಾರವಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಶುಕ್ರವಾರ ಜಿನೋಮಿಕ್​ ಸಿಕ್ವೆನ್ಸಿಂಗ್​​ಗಾಗಿ ಬೆಂಗಳೂರಿನಿಂದ ಕಳುಹಿಸಿಕೊಡಲಾದ ಸ್ಯಾಂಪಲ್​ಗಳಲ್ಲಿ AY.4 ಮತ್ತು AY.12 ಇರುವುದು ಕಂಡುಬಂದಿದೆ.

ಡೆಲ್ಟಾ ರೂಪಾಂತರಿಯ ಲಕ್ಷಣವನ್ನು ಹೊಂದಿದ್ದ 52 ಮಂದಿಯ ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 34 ಪ್ರತಿಶತ ಮಂದಿಯಲ್ಲಿ AY.4 ತಳಿ ಹಾಗೂ 13 ಪ್ರತಿಶತ ಮಂದಿಯಲ್ಲಿ AY.12 ತಳಿ ಕಂಡುಬಂದಿದೆ. ಈ ಸ್ಯಾಂಪಲ್​ಗಳು 19 ರಿಂದ 45 ವರ್ಷದೊಳಗಿನವರದ್ದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...