ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ಶವ್ವಾಲ್ ನ ಮೊದಲ ಚಂದ್ರ ದರ್ಶನವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿ ಕರಾವಳಿ ಭಾಗದಲ್ಲಿ ಏಪ್ರಿಲ್ 10 ರಂದು ಬುಧವಾರ ರಂಜಾನ್ ಆಚರಿಸಲಾಗುವುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದ್ ಉಲ್ ಫಿತ್ರ್ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಅಲ್ ಹಾಜ್ ತ್ವಾಕಾ ಅಹಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಪ್ರಥಮ ಚಂದ್ರ ದರ್ಶನ ಕೇರಳದ ಪೊನ್ನಾನಿಯಲ್ಲಿ ಆಗಿರುವುದರಿಂದ ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಜಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಕಳೆದ 29 ದಿನಗಳಿಂದ ಮುಸ್ಲಿಮರು ರಂಜಾನ್ ಮಾಸದ ಆಂಗವಾಗಿ ಉಪವಾಸ ಆಚರಿಸಿದ್ದರು. ರಂಜಾನ್ ಆಚರಣೆಯೊಂದಿಗೆ ಉಪವಾಸ ಅಂತ್ಯವಾಗಲಿದೆ.