– ಆರ್ಮ್‌ಸ್ಟ್ರಾಂಗ್ ಹಾಗೂ ಆಲ್ಡಿನ್ ಚಂದ್ರನಲ್ಲಿ ಹೆಜ್ಜೆ ಇಟ್ಟಿದ್ದನ್ನು ಜಗತ್ತಿನಾದ್ಯಂತ 60 ಕೋಟಿ ಜನರು ವೀಕ್ಷಿಸಿದ್ದರು.
– ಆಗಿನ ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಅವರು 1962ರಲ್ಲಿ ಚಂದ್ರಯಾನ ಯೋಜನೆ ನಿರ್ಧಾರ ಘೋಷಿಸಿದ್ದರು.
– ಈ ಯೋಜನೆಗಾಗಿ 1960ರ ದಶಕದಲ್ಲಿ 72 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.
– ಅಪೋಲೋ 11 ಕಮಾಂಡ್ ಮಾಡ್ಯುಲ್ 6 ಅಡಿ ಉದ್ದ ಹಾಗೂ 12.8 ಅಡಿ ಅಗಲವನ್ನು ಹೊಂದಿತ್ತು.
– ಹಲವು ಗಗನನೌಕೆಗಳ ಪ್ರಯೋಗದ ಬಳಿಕ 1967ರಲ್ಲಿ ಪ್ರೀಲಾಂಚ್ ಟೆಸ್ಟ್ ನಡೆಸುತ್ತಿರಬೇಕಾದರೆ ಅಪೋಲೋ 1 ಕಮಾಂಡ್ ಮಾಡ್ಯುಲ್ ಒಳಗೆ ಬೆಂಕಿ ಉಂಟಾದ ಪರಿಣಾಮ ಮೂವರು ಗಗನಯಾತ್ರಿಗಳು ಮೃತಪಟ್ಟಿದ್ದರು.
– ಗಗನಯಾನಿಗಳ ಸುರಕ್ಷತೆಗೆ ಆದ್ಯತೆ ನೀಡುವ ಮುಖೇನ ಸತತ ಪರೀಕ್ಷೆಗಳನ್ನು ನಡೆಸಿ 1969ರಲ್ಲಿ ಮಾನವ ಸಹಿತ ಯಶಸ್ವಿ ಗಗನಯಾತ್ರೆ ಕೈಗೊಂಡು ಇತಿಹಾಸ ಸೃಷ್ಟಿಸಿತು.
– ಚಂದ್ರನ ಮೇಲೆ ಇಳಿದ ಆರು ಗಂಟೆಗಳ ನಂತರ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆಯಿಟ್ಟರು. ಅವರು ಬಾಹ್ಯಾಕಾಶ ನೌಕೆಯ ಹೊರಗೆ ಸುಮಾರು ಎರಡುವರೆ ಗಂಟೆಗಳ ಕಾಲ ಕಳೆದರು. ಆಲ್ಡ್ರೀನ್ ಹಾಗೂ ನೀಲ್ ಇಬ್ಬರು ಗಗನಯಾತ್ರಿಗಳು 21.5 ಕೆ.ಜಿ ತೂಕದ ಚಂದ್ರನ ವಸ್ತುಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿದರು.