alex Certify ಮಕ್ಕಳಲ್ಲಿ ಮಂಕಿಪಾಕ್ಸ್: ರೋಗ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಲ್ಲಿ ಮಂಕಿಪಾಕ್ಸ್: ರೋಗ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಬ್ರಿಟನ್‌ ಮತ್ತು ಇತರ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ವೈರಲ್ ಝೂನೋಟಿಕ್ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ. ವಿಶೇಷವಾಗಿ, ಮಕ್ಕಳಲ್ಲಿ ಮಂಕಿಪಾಕ್ಸ್ ಕೆಲವು ದದ್ದುಗಳು, ಜ್ವರ ಮತ್ತು ನೋವು ಇತ್ಯಾದಿ ಲಕ್ಷಣಗಳು ಚಿಕನ್‌ಪಾಕ್ಸ್‌ ಅಥವಾ ಸಿಡುಬಿನಂತಯೇ ಇರಬಹುದು.

ಮಂಕಿ ಪಾಕ್ಸ್ ಸೋಂಕಿನ ಅಪಾಯವು ಮಕ್ಕಳಲ್ಲಿ ಅಪರೂಪ. ಇದ್ದರೂ ಸೌಮ್ಯವಾಗಿರುತ್ತದೆ. ಚಿಕನ್ ಪಾಕ್ಸ್ ಗುಣಲಕ್ಷಣಗಳನ್ನೇ ಇದು ಹೋಲಬಹುದು. ಲಾಕ್‌ಡೌನ್‌, ನಿರ್ಬಂಧಗಳು ಇಲ್ಲದ ಕಾರಣ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿಬೇಕು. ಮಂಕಿಪಾಕ್ಸ್‌ ಕುರಿತು ಜಾಗೃತಿ ಮೂಡಿಸುವ ಕೆಲಸ ಶುರುವಾಗಬೇಕಾಗಿದೆ ಎಂದು ಫರೀದಾಬಾದ್‌ನ ಅಮೆರಿಕ ಹೆಲ್ತ್‌ ಏಷ್ಯನ್‌ ಹಾಸ್ಪಿಟಲ್‌ನ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಚಾರುದತ್‌ ಹೇಳಿದರು.

ಮಂಕಿಪಾಕ್ಸ್‌ ಇತ್ತೀಚಿಗೆ ಏಕಾಏಕಿ ಆತಂಕಕ್ಕೆ ಕಾರಣವಾಗಿದೆ. ಆದರೂ, ಜನರು ಭಯಭೀತರಾಗಬೇಕಾದ ಅವಶ್ಯಕತೆ ಇಲ್ಲ. ಈ ವೈರಸ್ ಕೋವಿಡ್‌ನಂತೆ ಏನೂ ಗಂಭೀರ ಅಲ್ಲ. ಬ್ರಿಟನ್‌ನಲ್ಲಿ ಮೇ ತಿಂಗಳ ಆರಂಭದಲ್ಲಿ ಬಂದ ಮಂಕಿಪಾಕ್ಸ್‌ನ ಲಕ್ಷಣಗಳನ್ನು ಗಮನಿಸಿದರೆ, ದದ್ದುಗಳು, ಜ್ವರ ಮತ್ತು ಶಾರೀರಿಕ ನೋವು- ಇವುಗಳು “ಪಾಕ್ಸ್” ರೋಗಗಳ ಸಾಮಾನ್ಯ ಗುಣಲಕ್ಷಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ.

“ಮಂಕಿಪಾಕ್ಸ್ ಸೋಂಕು ದುಗ್ಧರಸ ಗ್ರಂಥಿಗಳ ಊತ ಮತ್ತು ತೀವ್ರ ನಿಶ್ಶಕ್ತಿಗಳನ್ನು ಸಹ ಹೊಂದಿದೆ. ದದ್ದು ಉಳಿದ ಪಾಕ್ಸ್‌ ರೋಗಗಳ ದದ್ದಿಗಿಂತ ಭಿನ್ನ. ಇದು ಮುಖದಿಂದಲೇ ಆರಂಭವಾಗುತ್ತದೆ. ನಂತರ ಅಂಗೈಗಳು ಮತ್ತು ಪಾದಗಳಿಗೆ ಹರಡುತ್ತದೆ ಮತ್ತು ದ್ರವದಿಂದ ತುಂಬಿದ ಗುಳ್ಳೆಗಳಲ್ಲಿ ಇವು ಇರುತ್ತವೆ. ಅಂತಿಮವಾಗಿ ಉದುರಿಹೋಗುತ್ತದೆ. ರೋಗಲಕ್ಷಣಗಳು 2-4 ವಾರಗಳವರೆಗೆ ಇರುತ್ತದೆ” ಎಂದು ಡಾ. ಅರೋರಾ ಹೇಳುತ್ತಾರೆ.

ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ, ಜ್ವರವು ಸಾಮಾನ್ಯವಾಗಿ 2-3 ನೇ ದಿನ (102 ಡಿಗ್ರಿ ತಲುಪುತ್ತದೆ) ಹೆಚ್ಚಾಗುತ್ತದೆ. ರಾಶಸ್‌ ಸಾಮಾನ್ಯವಾಗಿ 3 ಅಥವಾ 4ನೇ ದಿನದಿಂದ ಪ್ರಾರಂಭವಾಗಿ, ಉಲ್ಬಣವಾಗಿ ನಂತರ ಕ್ಷೀಣಿಸುತ್ತದೆ. ಮಕ್ಕಳಲ್ಲಿ, ಇದರಿಂದಾಗಿ ಬಳಲಿಕೆ ಮತ್ತು ಸುಸ್ತುಗಳಿಂದ ಕೂಡಿದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಜ್ವರನಿವಾರಕಗಳೊಂದಿಗೆ ಜಲಸಂಚಯನ ಮತ್ತು ದ್ರವದ ನಿರ್ವಹಣೆ ಮಕ್ಕಳಿಗೆ ಅವಶ್ಯಕ ಎಂದು ಡಾ. ಅರೋರಾ ವಿವರಿಸಿದರು.

ಮಂಕಿಪಾಕ್ಸ್ ತಡೆಗಟ್ಟುವ ಕ್ರಮ

* ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು (ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ನೊಂದಿಗೆ 20 ಸೆಕೆಂಡುಗಳ ಕಾಲ).

* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟಬೇಕು.

* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು

* ರಾಶಸ್‌ ಹೊಂದಿರುವವರೊಂದಿಗೆ ಯಾವುದೇ ಸಂಪರ್ಕ ಬೇಡ.

* ಅನಾರೋಗ್ಯದ ರೋಗಿಯ ಯಾವುದೇ ದ್ರವ ಅಥವಾ ವಸ್ತುವಿನ ಸಂಪರ್ಕ ಮಾಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...