alex Certify ಆರ್ಥಿಕ ಸಮಸ್ಯೆ ನಿವಾರಿಸಿ ಪ್ರೀತಿ – ವಿಶ್ವಾಸ ಗಳಿಸಲು ಫೆಂಗ್ ಶೂಯಿ ಮಂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಮಸ್ಯೆ ನಿವಾರಿಸಿ ಪ್ರೀತಿ – ವಿಶ್ವಾಸ ಗಳಿಸಲು ಫೆಂಗ್ ಶೂಯಿ ಮಂತ್ರ

ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಜೀವಿಸಲು ಹಣ ಮತ್ತು ಪ್ರೀತಿ – ವಿಶ್ವಾಸ ಬೇಕೇ ಬೇಕು. ಅದನ್ನು ಸುಧಾರಿಸಿಕೊಳ್ಳಲು ಪ್ರತಿದಿನ ಪ್ರಯತ್ನಿಸುತ್ತಿರುತ್ತೇವೆ. ಹಣ ನಮ್ಮ ಅವಶ್ಯಕತೆಗಳನ್ನು ಪೂರೈಸಿದರೆ ಪ್ರೀತಿ ವಿಶ್ವಾಸ ಭಾವನಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಜೀವನದಲ್ಲಿ ಇವುಗಳ ಕೊರತೆಯಿದ್ದರೆ ಫೆಂಗ್ ಶೂಯಿ ಮೂಲಕ ಲಾಭವನ್ನು ಪಡೆಯಬಹುದು.

ಫೆಂಗ್ ಶೂಯಿ ಮತ್ತು ಮನೆಯ ವಾಸ್ತು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮನೆಯ ವಾಸ್ತುವಿಗೂ ಹಾಗೂ  ಆರ್ಥಿಕ ಪರಿಸ್ಥಿತಿಗೂ ಸಂಬಂಧಿಸಿದೆ. ಅಡುಗೆ ಮನೆಯನ್ನು ಹೆಚ್ಚು ಅಚ್ಚುಕಟ್ಟಾಗಿ ಇಟ್ಟುಕೊಂಡರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಗ್ಯಾಸ್ ಸ್ಟೌವ್ಗಳು ಮತ್ತು ಅಡುಗೆ ಮನೆಯ ಉಪಕರಣಗಳು ಸರಿಯಾಗಿ ಕೆಲಸ ಮಾಡುವಂತಿರಬೇಕು. ಹಾಳಾದ ಅಥವಾ ಕೆಲಸಕ್ಕೆ ಬಾರದ  ವಸ್ತುಗಳನ್ನು ಇಡಬಾರದು.

ಬೆಡ್ ರೂಂನಲ್ಲಿ ಕೇವಲ ಒಂದೇ ಕುರ್ಚಿ, ದಿಂಬು, ಪೇಂಟಿಂಗ್ ಮತ್ತು ಫೋಟೋ ಫ್ರೇಮ್ ಗಳ ಬದಲು ಜೋಡಿಯಾಗಿಯೇ ಇಡಿ. ಆದಷ್ಟು ರೌಂಡ್ ಟೇಬಲ್ ಬಳಸಿ. ಹೀಗೆ ಮಾಡುವುದರಿಂದ ವೈವಾಹಿಕ ಜೀವನ ಹೆಚ್ಚು ಸಂತೋಷದಿಂದ ಕೂಡಿರುತ್ತದೆ.

ಮನೆಯ ಮುಖ್ಯ ದ್ವಾರವನ್ನು ಆಕರ್ಷಕವಾಗಿ ಮತ್ತು ಚೆನ್ನಾಗಿ ಅಲಂಕರಿಸಬೇಕೆಂದು ಫೆಂಗ್ ಶೂಯಿ ಹೇಳುತ್ತದೆ. ಮನೆಯ ಬಾಗಿಲಿಗೆ ವೆಲ್ಕಮ್ ಬೋರ್ಡ್ ಅಥವಾ ವಾಲ್ ಪೇಂಟಿಂಗ್ ಇರುವುದು ಹೆಚ್ಚು  ಆಕರ್ಷಣೀಯ ಹಾಗೂ ಶುಭ ಸಂಕೇತವಾಗಿದೆ.

ಮನಿ ಪ್ಲಾಂಟ್  ಮನೆಯಲ್ಲಿ ಇಟ್ಟರೆ  ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಆದಾಯದ ಮೂಲವನ್ನು ಹೆಚ್ಚಿಸಬಹುದು.

ವಿವಿಧ ಬಣ್ಣಗಳು, ಹಣ, ಸಂಪತ್ತಿಗೆ ಮತ್ತು ಭಾವನೆಗಳಿಗ ಸಂಬಂಧಿಸಿವೆ. ಕೆಂಪು, ನೇರಳೆ ಮತ್ತು ಹಸಿರು ಬಣ್ಣಗಳು ಸಮೃದ್ಧಿಯ ಸಂಕೇತವಾಗಿದೆ. ಹಾಗಾಗಿ ಮನೆಯಲ್ಲಿ ಈ ಬಣ್ಣಗಳ ಬಳಕೆ ಹೆಚ್ಚು ಮಾಡಿ.

ಒಡೆದ ವಸ್ತುಗಳನ್ನು ರಿಪೇರಿ ಮಾಡಿಸಿಕೊಳ್ಳಿ ಅಥವಾ ಮನೆಯಿಂದ ಹೊರಹಾಕಿ. ಮುರಿದ ಅಥವಾ ಹಾನಿಗೊಳಗಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಫೆಂಗ್ ಶೂಯಿಯಲ್ಲಿ ಕೆಂಪು ಬಣ್ಣ ಅತ್ಯಂತ ಪ್ರಭಾವಶಾಲಿ ಮತ್ತು ಅದೃಷ್ಟದ ಬಣ್ಣ. ಈ ಕಾರಣಕ್ಕಾಗಿ, ಮನೆಯ ಪ್ರಧಾನ ಬಾಗಿಲಿಗೆ ಕೆಂಪು ಬಣ್ಣವನ್ನು ಬಳಸುವುದು ಸೂಕ್ತ.

ಮನೆಯ ಒಳಗೆ ನಕಾರಾತ್ಮಕವಾಗಿ ಇರುವಂತಹ ಯಾವುದೇ ಚಿತ್ರ ಅಥವಾ ಪೇಂಟಿಂಗ್ ಬಳಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...