alex Certify investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

investment in post office: ಸುರಕ್ಷಿತ ಹೂಡಿಕೆ ಬಯಸಿದ್ರೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್

ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಅಂಚೆ ಕಚೇರಿ ಯೋಜನೆಗಳು ಸೇರಿವೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ಲಾಭ ಸಿಗಲಿದೆ. ಅಂಚೆ ಕಚೇರಿ ಗ್ರಾಮ ಸುರಕ್ಷಾ ಯೋಜನೆಯ ಒಂದು ಉತ್ತಮ ಆಯ್ಕೆಯಾಗಿದೆ.  ಗ್ರಾಮ ಸುರಕ್ಷಾ ಯೋಜನೆಯಡಿಯಲ್ಲಿ ಬೋನಸ್‌ನೊಂದಿಗೆ ವಿಮಾ ಮೊತ್ತವು 80 ವರ್ಷ ವಯಸ್ಸಿನಲ್ಲಿ ಅಥವಾ ಮರಣದ ಸಂದರ್ಭದಲ್ಲಿ ಕಾನೂನು ಉತ್ತರಾಧಿಕಾರಿಗೆ ಸೇರುತ್ತದೆ.

19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಗ್ರಾಮ ಸುರಕ್ಷಾ ಯೋಜನೆ ತೆಗೆದುಕೊಳ್ಳಬಹುದು. ಈ ಯೋಜನೆಯಡಿ ಕನಿಷ್ಠ 10,000 ರಿಂದ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು.

ಗ್ರಾಮ ಸುರಕ್ಷಾ ಬಿಮಾ ಯೋಜನೆಯಲ್ಲಿ ಸಾಲ ಸಿಗುತ್ತದೆ.  ಪಾಲಿಸಿಯನ್ನು ಖರೀದಿಸಿದ ನಾಲ್ಕು ವರ್ಷಗಳ ನಂತರ ಇದನ್ನು ಪಡೆಯಬಹುದು. ಗ್ರಾಹಕರು 3 ವರ್ಷಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡುವ ಆಯ್ಕೆ ಹೊಂದಿರುತ್ತಾರೆ.

ಒಬ್ಬರು 19 ವರ್ಷ ವಯಸ್ಸಿನಲ್ಲಿ 10 ಲಕ್ಷಗಳ ಗ್ರಾಮ ಸುರಕ್ಷಾ ಬಿಮಾ ಯೋಜನೆಯನ್ನು ಖರೀದಿಸಿದರೆ 60 ವರ್ಷಗಳ ಅವಧಿಯಲ್ಲಿ 34.60 ಲಕ್ಷ ರೂಪಾಯಿಯಾಗಿರುತ್ತದೆ.

This article gives idea about the one of the best investment scheme available in Post office.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...