alex Certify ದೇಶದ ಹೆಸರು ಬದಲಿಸಲು ‘ಟೀಂ ಇಂಡಿಯಾ’ ಆಟಗಾರನ ಪತ್ನಿಯಿಂದ ಪ್ರಧಾನಿಗೆ ಪತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಹೆಸರು ಬದಲಿಸಲು ‘ಟೀಂ ಇಂಡಿಯಾ’ ಆಟಗಾರನ ಪತ್ನಿಯಿಂದ ಪ್ರಧಾನಿಗೆ ಪತ್ರ…!

ದೇಶದಾದ್ಯಂತ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ಆಗಸ್ಟ್ 13 ರಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಟೀಂ ಇಂಡಿಯಾ ಆಟಗಾರನ ಮಾಜಿ ಪತ್ನಿಯೊಬ್ಬರು, ದೇಶದ ಹೆಸರನ್ನು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ನೃತ್ಯದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರ ಜೊತೆಗೆ ನಮ್ಮ ದೇಶ ಭಾರತ ಅಥವಾ ಹಿಂದುಸ್ತಾನ್ ಎಂಬ ಹೆಸರಿನಿಂದ ಮಾತ್ರ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಲಿ. ಹೀಗಾಗಿ ಇಂಡಿಯಾ ಬದಲಿಗೆ ಭಾರತ್ ಅಥವಾ ಹಿಂದುಸ್ತಾನ್ ಎಂಬುದಾಗಿ ಬದಲಿಸಲಿ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರಿಗೂ ಟ್ಯಾಗ್ ಮಾಡಿದ್ದು, ಹಸೀನ್ ಜಹಾನ್ ಅವರ ಈ ಇನ್ಸ್ಟಾ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ವೃತ್ತಿಪರ ಮಾಡೆಲ್ ಆಗಿದ್ದ ಹಸೀನ್ ಜಹಾನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಾಗಿ ಚಿಯರ್ ಲೀಡರ್ ಆಗಿಯೂ ಕೆಲಸ ಮಾಡಿದ್ದರು. ಇದೇ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರೊಂದಿಗೆ ಪ್ರೇಮಾಂಕುರವಾಗಿ ವಿವಾಹವಾಗಿದ್ದರು. ಆದರೆ ಆ ಬಳಿಕ ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಮಗಳೊಂದಿಗೆ ವಾಸಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...