alex Certify ದುಬಾರಿ ಕಾರು ಪಡೆದ ಖುಷಿಯಲ್ಲಿ ಗುಂಡು ಹಾರಿಸಿದ ಯುವಕ; ಪೊಲೀಸರಿಂದ ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಕಾರು ಪಡೆದ ಖುಷಿಯಲ್ಲಿ ಗುಂಡು ಹಾರಿಸಿದ ಯುವಕ; ಪೊಲೀಸರಿಂದ ಕೇಸ್ ದಾಖಲು

ಯುವಕನೊಬ್ಬ ತನ್ನ ಪೋಷಕರಿಂದ ದುಬಾರಿ ಬೆಂಟ್ಲಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದು, ಈ ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂತಹದೊಂದು ಘಟನೆ ಪಂಜಾಬಿನ ಮೊಹಾಲಿಯಲ್ಲಿ ನಡೆದಿದೆ.

ಮೊಹಾಲಿಯ ಖರಾರ್ ಪಟ್ಟಣದ ಶುಭಂ ರಜಪೂತ್ ಎಂಬ ಯುವಕನಿಗೆ ಆತನ ಹೆತ್ತವರು ಬೆಂಟ್ಲಿ ಕಾರು ಕೊಡಿಸಿದ್ದಾರೆ. ಇದರಿಂದ ಖುಷಿಯಾದ ಆತ ತನ್ನ ಸ್ನೇಹಿತರನ್ನು ಕರೆದುಕೊಂಡು ಸುತ್ತಾಡಿಸಿದ್ದಾನೆ.

ಅಷ್ಟೇ ಅಲ್ಲ ಕಾರು ತೆಗೆದುಕೊಂಡ ಸಂಭ್ರಮವನ್ನು ಆಚರಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಈಗ ಶುಭಂ ರಜಪೂತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...