ನವದೆಹಲಿ: ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ದೇಶದ ಮಹಿಳಾ ನಾಗರಿಕರಿಗೆ ಕೇಂದ್ರ ಸರ್ಕಾರ 2.20 ಲಕ್ಷ ರೂಪಾಯಿ ಸಾಲ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಆದರೆ ಫ್ಯಾಕ್ಟ್ಚೆಕ್ನಿಂದ ತಿಳಿದು ಬಂದಿರುವ ಸತ್ಯ ಏನೆಂದರೆ, ಇದು ಸುಳ್ಳು ಸುದ್ದಿ. ಅಂತಹ ಯಾವುದೇ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ. ವಿನಾಕಾರಣ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದ್ದು, ಇದನ್ನು ನಂಬಬಾರದು ಎಂದು ಹೇಳಲಾಗಿದೆ.
‘ಪ್ರಧಾನ ಮಂತ್ರಿ ನಾರಿ ಶಕ್ತಿ ಯೋಜನೆ’ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮಹಿಳೆಯರಿಗೆ 2 ಲಕ್ಷದ 20 ಸಾವಿರ ರೂ.ಗಳನ್ನು ನೀಡಲಿದೆ ಎಂದು ‘ಇಂಡಿಯನ್ ಜಾಬ್’ ಯೂಟ್ಯೂಬ್ ಹೆಸರಿನ ಚಾನೆಲ್ ಹೇಳಿಕೊಳ್ಳುತ್ತಿದೆ. ಆದರೆ ಇಂಥ ಯಾವುದೇ ಯೋಜನೆ ಜಾರಿಯಲ್ಲಿ ಇಲ್ಲ. ಇದರ ಪ್ರಯೋಜನ ಪಡೆದು ಕೆಲವೊಂದು ಲಿಂಕ್ಗಳನ್ನು ಕಳುಹಿಸಲಾಗುತ್ತಿದ್ದು, ದಯವಿಟ್ಟು ಯಾರೂ ಅದರ ಮೇಲೆ ಕ್ಲಿಕ್ ಮಾಡಬಾರದು ಎಂದು ಸರ್ಕಾರ ಹೇಳಿದೆ.