ಕೇಂದ್ರ ಸರ್ಕಾರ ಇಪಿಎಫ್‌ಒ ಚಂದಾದಾರರಿಗೆ ಖುಷಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ. ಮೋದಿ ಸರ್ಕಾರ, ಶೀಘ್ರದಲ್ಲೇ ಪಿಎಫ್ ಖಾತೆದಾರರ ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಸಭೆ ಶೀಘ್ರದಲ್ಲೇ ನಡೆಯಲಿದೆ. ಇದರಲ್ಲಿ ಕೆಲ ಮಹತ್ವದ ವಿಷ್ಯಗಳ ಚರ್ಚೆ ನಡೆಯಲಿದೆ. ಸಭೆಯಲ್ಲಿ ಪಿಂಚಣಿ ಮೊತ್ತ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಭಿಕ್ಷುಕ ಮಕ್ಕಳ ಶಿಕ್ಷಣದ ಖರ್ಚು-ವೆಚ್ಚ ಭರಿಸುತ್ತಿದ್ದಾರೆ ಈ ಶಿಕ್ಷಕರು
ಕೇಂದ್ರ ಕಾರ್ಮಿಕ ಸಂಘಟನೆಗಳು ಕನಿಷ್ಠ ಪಿಂಚಣಿಯನ್ನು 1,000 ರೂಪಾಯಿಯಿಂದ 6,000 ರೂಪಾಯಿಗೆ ಹೆಚ್ಚಿಸುವಂತೆ ಒತ್ತಾಯಿಸಿವೆ. ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಇದನ್ನು 3,000 ರೂಪಾಯಿ ಮಾಡಬಹುದು ಎನ್ನಲಾಗ್ತಿದೆ. ಖಾಸಗಿ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಇಪಿಎಫ್‌ಒ ಹಣವನ್ನು ಹೂಡಿಕೆ ಮಾಡುವ ವಿವಾದಾತ್ಮಕ ವಿಷಯ ಕೂಡ ಸಭೆಯಲ್ಲಿ ಚರ್ಚೆಯಾಗಲಿದೆ. ಪಿಎಫ್ ಬಡ್ಡಿದರದ ಬಗ್ಗೆಯೂ ಚರ್ಚೆಯಾಗಲಿದೆ.
ಪಿಎಫ್ ಬಡ್ಡಿ ದರ ಈಗ ಶೇಕಡಾ 8.5ರಷ್ಟಿದೆ. ಇದನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈ ಹಿಂದೆ ನವೆಂಬರ್ 16 ರಂದು ಸಿಬಿಟಿ ಸಭೆ ನಡೆಯಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿತ್ತು.