alex Certify ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣ ಬಳಿಯಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣ ಬಳಿಯಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್…!

ಮಾಸ್ಕೋ: ಫೋಟೋಶೂಟ್‌ಗಾಗಿ ತನ್ನ ಸಾಕು ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣವನ್ನು ಬಳಿದ ಮಾಡೆಲ್ ಅನ್ನು  ಜನರು ಟೀಕಿಸಿದ್ದಾರೆ.

ರಷ್ಯಾದ ಮಾಡೆಲ್ ಅನ್ನಾ ಸ್ತೂಪಕ್ ತನ್ನ ನಾಯಿಮರಿಗೆ 5 ಲಕ್ಷ ರೂ. ಖರ್ಚು ಮಾಡಿ, ಅದರ ಮೈಮೇಲೆ ಕಿತ್ತಳೆ ಬಣ್ಣವನ್ನು ಬಳಿದಿದ್ದಾರೆ. ಅನ್ನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನಾಯಿಮರಿಯ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಅದರ ಮುಖ ಮತ್ತು ಬಾಲವನ್ನು ಹೊರತುಪಡಿಸಿ ಅದರ ತುಪ್ಪಳಕ್ಕೆ ಸಂಪೂರ್ಣವಾಗಿ ಕಿತ್ತಳೆ ಬಣ್ಣವನ್ನು ಬಳಿಯಲಾಗಿದೆ.

ಬಿಳಿ ಬಣ್ಣವಿದ್ದ ನಾಯಿ ಈಗ ಕಿತ್ತಳೆ ಬಣ್ಣವನ್ನು ಪಡೆದಿದೆ. ಫೋಟೋಶೂಟ್ ಮಾಡಲು ತನ್ನ ನಾಯಿಗೆ ಬಣ್ಣ ಬಳಿದಿದ್ದು, ಅದಕ್ಕಾಗಿ 5 ಲಕ್ಷ ರೂ.ನಷ್ಟು ಖರ್ಚು ಮಾಡಲಾಗಿದೆ ಎಂದು ಮಾಡೆಲ್ ಹೇಳಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿದ ಅನ್ನಾ, ತನ್ನ ಪುಟ್ಟ ಪೈಲೆಟ್ ಎಂದು ಶೀರ್ಷಿಕೆ ನೀಡಿದ್ದಾಳೆ.

ಇನ್ನು ನಾಯಿಯ ತುಪ್ಪಳಕ್ಕೆ ಬಣ್ಣ ಬಳಿದಿರುವ ಬಗ್ಗೆ ಮಾಡೆಲ್ ವಿರುದ್ಧ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಟೀಕೆಗೆ ತಿರುಗೇಟು ನೀಡಿದ ಅನ್ನಾ, ತನ್ನ ಮುದ್ದಿನ ನಾಯಿಯ ಚರ್ಮಕ್ಕೆ ಹಾನಿಯಾಗದಂತೆ ಬಹಳ ಜಾಗರೂಕತೆಯಿಂದ ಅದರ ತುಪ್ಪಳಕ್ಕಷ್ಟೇ ಬಣ್ಣ ಹಚ್ಚಲಾಗಿದೆ ಎಂದು ವಾದಿಸಿದ್ದಾಳೆ. ಈ ವರ್ಷದ ಜನವರಿಯಲ್ಲಿ, ಕೆನಡಾದ ಮಹಿಳೆಯೊಬ್ಬರು ತನ್ನ ನಾಯಿಗೆ ಬಹು ಬಣ್ಣಗಳನ್ನು ಹಾಕಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...