ಹೊಟ್ಟೆ ನೋವೆಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿದ್ದಾನೆ. ಆರಂಭದಲ್ಲಿ ಸಾಮಾನ್ಯ ಚಿಕಿತ್ಸೆ ನಡೆಸಿದ ವೈದ್ಯರು, ಚಿಕಿತ್ಸೆ ಫಲ ನೀಡದ ಕಾರಣ ಎಕ್ಸ್ ರೇ ಗೆ ಮುಂದಾಗಿದ್ದಾರೆ. ಆಗ ಹೊಟ್ಟೆಯಲ್ಲಿ ಕಂಡ ಮೊಬೈಲ್ ನೋಡಿ ದಂಗಾಗಿದ್ದಾರೆ.
ಘಟನೆ ಈಜಿಪ್ಟ್ ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿದೆ. ಮೊಬೈಲ್ ಹೇಗೆ ಒಳಗೆ ಹೋಯ್ತು ಎಂಬುದು ಸರಿಯಾಗಿ ತಿಳಿದು ಬಂದಿಲ್ಲ. ಕಳೆದ ಆರು ತಿಂಗಳಿಂದ ನೋಕಿಯಾ 3310 ಮೊಬೈಲ್ ಆತನ ಹೊಟ್ಟೆಯಲ್ಲಿತ್ತಂತೆ. ಮೊಬೈಲ್ ಸ್ವಾಭಾವಿಕವಾಗಿ ಹೊರಗೆ ಬರಲಿದೆ ಎಂದು ವ್ಯಕ್ತಿ ನಂಬಿದ್ದ.
ಕ್ರಿಕೆಟ್ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ
ದಿನ ಕಳೆದಂತೆ ವ್ಯಕ್ತಿಗೆ ಹೊಟ್ಟೆ ನೋವು ಹೆಚ್ಚಾಗಿದೆ. ಊಟಕ್ಕೆ ತೊಂದರೆಯಾಗಿದೆ. ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದಾನೆ. ಆರಂಭದಲ್ಲಿ ಸೋಂಕಿನ ಶಂಕೆಯಲ್ಲೇ ವೈದ್ಯರು ಚಿಕಿತ್ಸೆ ಮಾಡಿದ್ದಾರೆ. ಆದ್ರೆ ಹೊಟ್ಟೆ ನೋವು ಕಡಿಮೆಯಾಗದ ಕಾರಣ, ಎಕ್ಸ್ ರೇ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಇಡೀ ಮೊಬೈಲ್ ಇರುವುದು ಪತ್ತೆಯಾಗಿದೆ. ಇದ್ರಿಂದ ದಂಗಾದ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ, ಮೊಬೈಲ್ ಹೊರಗೆ ತೆಗೆದಿದ್ದಾರೆ. ಇದೊಂದು ವಿಚಿತ್ರ ಘಟನೆ. ಇಡೀ ಮೊಬೈಲ್ ಹೇಗೆ ಒಳಗೆ ಹೋಯ್ತು ಎಂಬುದು ಗೊತ್ತಾಗ್ತಿಲ್ಲವೆಂದು ವೈದ್ಯರು ಹೇಳಿದ್ದಾರೆ.