alex Certify Viral Video: ರಿಪೇರಿ ಮಾಡುವಾಗಲೇ ಮೊಬೈಲ್ ಸ್ಫೋಟ; ಘಟನೆಯ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ರಿಪೇರಿ ಮಾಡುವಾಗಲೇ ಮೊಬೈಲ್ ಸ್ಫೋಟ; ಘಟನೆಯ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮೊಬೈಲ್ ರಿಪೇರಿ ಅಂಗಡಿ ಒಂದರಲ್ಲಿ ಅದರ ಬ್ಯಾಟರಿ ಬಿಚ್ಚುತ್ತಿರುವಾಗಲೇ ಸ್ಪೋಟಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಲಲಿತ್ ಪುರ ಪಾಲಿನಗರದಲ್ಲಿ ನಡೆದಿದೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ಯುವಕನೊಬ್ಬ ತನ್ನ ಮೊಬೈಲನ್ನು ರಿಪೇರಿ ಮಾಡಿಸುವ ಸಲುವಾಗಿ ಈ ಅಂಗಡಿಗೆ ತಂದಿದ್ದಾನೆ. ಆತ ಗಾಜಿನ ಟೇಬಲ್ ಆಚೆ ಕುಳಿತಿದ್ದರೆ ರಿಪೇರಿ ಮಾಡುವಾತ ಈಚೆ ಬದಿ ಇದ್ದಾನೆ.

ಗ್ರಾಹಕ, ಸಮಸ್ಯೆ ಹೇಳಿದ ಬಳಿಕ ಮೊಬೈಲ್ ಅಂಗಡಿಯವನು ಅದರ ಬ್ಯಾಟರಿ ಬಿಚ್ಚಲು ಮುಂದಾಗಿದ್ದು, ಈ ವೇಳೆ ಏಕಾಏಕಿ ಸ್ಪೋಟ ಸಂಭವಿಸಿದೆ. ಅದೃಷ್ಟವಶಾತ್ ಮೊಬೈಲ್ ಗ್ರಾಹಕ ಹಾಗೂ ಅಂಗಡಿ ಮಾಲೀಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

— Bhadohi Wallah (@Mithileshdhar) October 23, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...