alex Certify SHOCKING: ಹಿರಿಯ ಮಹಿಳೆಗೆ ಎಂಎನ್ಎಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ; ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಹಿರಿಯ ಮಹಿಳೆಗೆ ಎಂಎನ್ಎಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ; ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆ

ಬ್ಯಾನರ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತನೊಬ್ಬ ಹಿರಿಯ ಮಹಿಳೆಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ಮೂರು ಮಂದಿಯನ್ನು ಬಂಧಿಸಿದ್ದಾರೆ.

ಮುಂಬೈನ ಕಾಮಟಿಪುರ ಪ್ರದೇಶದಲ್ಲಿ ಗುರುವಾರದಂದು ಈ ಘಟನೆ ನಡೆದಿದ್ದು, ಎಂಎನ್ಎಸ್ ಕಾರ್ಯಕರ್ತ ವಿನೋದ್ ಎಂಬಾತ ತನ್ನ ಇಬ್ಬರು ಸಹಚರರೊಂದಿಗೆ ಪಕ್ಷದ ಬ್ಯಾನರ್ ಹಾಕಲು ಬಂದಿದ್ದಾನೆ. ಹಿರಿಯ ಮಹಿಳೆಯ ಮೆಡಿಕಲ್ ಶಾಪ್ ಮುಂಭಾಗ ಬ್ಯಾನರ್ ಹಾಕಲು ಹೋದಾಗ ಆಕೆ ಆಕ್ಷೇಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಬಳಿಕ ವಿನೋದ್ ಹಿರಿಯ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ. ಮಹಿಳೆ ಮೂವರ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವರುಗಳನ್ನು ಬಂಧಿಸಿದ್ದಾರೆ.

ಇದರ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಂಎನ್ಎಸ್ ನಾಯಕರು, ಇದರಲ್ಲಿ ಪಕ್ಷದ ಕಾರ್ಯಕರ್ತನ ತಪ್ಪಿಲ್ಲ. ಮಹಿಳೆ ಬ್ಯಾನರ್ ಹರಿದು ಹಾಕಿ ಅವರುಗಳನ್ನು ನಿಂದಿಸಿದ್ದಾರೆ. ಹೀಗಾಗಿ ವಾಗ್ವಾದ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...