ಬೆಂಗಳೂರು: ರಾಜ್ಯದಲ್ಲಿ ಇಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಮತದಾನ ನಡೆದಿದೆ.
ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ‘ಉತ್ಸಾಹ’ದಿಂದಲೇ ಮತ ಚಲಾಯಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಶೇಕಡ 99 ಕ್ಕಿಂತ ಅಧಿಕ ಮತದಾನವಾಗಿರುವುದು ವಿಶೇಷವಾಗಿದೆ.
ಬೀದರ್ -ಶೇಕಡ 99.83
ಕಲಬುರ್ಗಿ -ಶೇಕಡ 99.73
ವಿಜಯಪುರ -ಶೇಕಡ 99.55
ಬೆಳಗಾಂ -ಶೇಕಡ 99.98
ಉತ್ತರಕನ್ನಡ -ಶೇಕಡ 99.76
ಧಾರವಾಡ -ಶೇಕಡ 99.68
ರಾಯಚೂರು -ಶೇಕಡ 99.86
ಬಳ್ಳಾರಿ -ಶೇಕಡ 99.81
ಚಿತ್ರದುರ್ಗ -ಶೇಕಡ 99.88
ಶಿವಮೊಗ್ಗ -ಶೇಕಡ 99.86
ದಕ್ಷಿಣಕನ್ನಡ -ಶೇಕಡ 99.71
ಚಿಕ್ಕಮಗಳೂರು -ಶೇಕಡ 99.78
ಹಾಸನ -ಶೇಕಡ 99.78
ತುಮಕೂರು -ಶೇಕಡ 99.78
ಮಂಡ್ಯ -ಶೇಕಡ 99.85
ಬೆಂಗಳೂರು ನಗರ -ಶೇಕಡ 99.86
ಬೆಂಗಳೂರು ಗ್ರಾಮಾಂತರ -ಶೇಕಡ 99.90
ಕೋಲಾರ -ಶೇಕಡ 99.96
ಕೊಡಗು -ಶೇಕಡ 99.70
ಮೈಸೂರು 99.73 ರಷ್ಟು ಮತದಾನವಾಗಿದೆ.
ಶೇಕಡವಾರು ಮತದಾನದೊಂದಿಗೆ ರಾಜಕೀಯ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಎಲ್ಲಾ ಲೆಕ್ಕಾಚಾರಗಳಿಗೆ ಡಿಸೆಂಬರ್ 14 ರಂದು ಮತ ಎಣಿಕೆ ದಿನ ತೆರೆ ಬೀಳಲಿದೆ.