alex Certify ಸ್ವಪಕ್ಷೀಯ ಶಾಸಕರ ವಿರುದ್ಧ ಅಶ್ಲೀಲ ಪದ ಬಳಸಿದ ವೀರಣ್ಣ ಚರಂತಿಮಠ; ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಪಕ್ಷೀಯ ಶಾಸಕರ ವಿರುದ್ಧ ಅಶ್ಲೀಲ ಪದ ಬಳಸಿದ ವೀರಣ್ಣ ಚರಂತಿಮಠ; ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ವೈರಲ್

ಬೇಡ ಜಂಗಮ ಪ್ರಮಾಣ ಪತ್ರಕ್ಕಾಗಿ ಜಂಗಮ ಸಮುದಾಯ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಇದರ ಮಧ್ಯೆ ಈ ಹೋರಾಟದ ಕುರಿತಂತೆ ಮಾತನಾಡುವ ಭರದಲ್ಲಿ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ, ಸ್ವಪಕ್ಷಿಯ ಶಾಸಕರ ವಿರುದ್ಧವೇ ಅಶ್ಲೀಲ ಪದ ಬಳಸಿದ್ದಾರೆ. ಇದರ ಆಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕರ್ನಾಟಕ ಬೇಡ ಜಂಗಮ ಸಮಾಜ ಸಂಘಟನಾ ಕಾರ್ಯದರ್ಶಿ, ರವಿ ಹಿರೇಮಠ ಎಂಬವರೊಂದಿಗೆ ಮಾತನಾಡುವಾಗ ವೀರಣ್ಣ ಚರಂತಿಮಠ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ವಿರುದ್ಧ ಆ ಲೋಫರ್ ಸೂ…….ಮಗ ನನ್ನನ್ನು ಭೇಟಿಯೇ ಆಗಿಲ್ಲ. ಹೀಗಿದ್ದರೂ ಸಹ ನಾನು ಏನೋ ಹೇಳಿದ್ದೇನೆ ಅಂತ ಹೇಳಿದನಂತೆ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ.

ಅಲ್ಲದೆ ದಲಿತರ ಕುರಿತೂ ವೀರಣ್ಣ ಚರಂತಿಮಠ ಹಗುರವಾಗಿ ಮಾತನಾಡಿದ್ದು, ನಾವು ರಾಜಕಾರಣಿಗಳು ಬಹಿರಂಗವಾಗಿ ಮಾತನಾಡಿದರೆ ಈ ಎಸ್ಸಿ ಗಳು ಮೈಮೇಲೆ ಬೀಳ್ತಾವೆ ಎಂದು ಹೇಳಿದ್ದಾರೆ. ಇದರ ಆಡಿಯೋ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ವೀರಣ್ಣ ಚರಂತಿಮಠ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...