ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಾ ಬಂದಿರುವ ಹೆಚ್. ವಿಶ್ವನಾಥ್ ಇದೀಗ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಸೂಕ್ತವಲ್ಲ ಎಂದು ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ,. ಯಡಿಯೂರಪ್ಪಗೆ ವಯಸ್ಸಾಗಿದ್ದು ರಾಜ್ಯದ ಏಳ್ಗೆಗಾಗಿ ಶ್ರಮಿಸುವ ಪವರ್ ಹಾಗೂ ಸ್ಪಿರಿಟ್ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿರುವ ಹೆಚ್. ವಿಶ್ವನಾಥ್ ವಿರುದ್ಧ ಶಾಸಕ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಎಂಪಿ ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪರ ವಯಸ್ಸನ್ನ ಪ್ರಶ್ನೆ ಮಾಡೋ ವಿಶ್ವನಾಥ್ ನಿಮ್ಮ ವಯಸ್ಸೆಷ್ಟು ಅನ್ನೋದು ನೆನಪಿದೆಯಾ..? ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಏನಿದೆ..? ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿದವರು ನೀವು. ಕಾಂಗ್ರೆಸ್ ನಿಮಗೆ ಎಲ್ಲಾ ಅಧಿಕಾರ ನೀಡಿದ್ರೂ ಅಲ್ಲಿಂದ ಹೊರ ಬಂದಿರಿ, ಜೆಡಿಎಸ್ ರಾಜ್ಯಾಧ್ಯಕ್ಷನ ಸ್ಥಾನ ನೀಡಿದರೂ ಸಹ ದೇವೇಗೌಡರಿಗೆ ಮೋಸ ಮಾಡಿದ್ದೀರಾ. ಇದೀಗ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದೀರಾ. ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್.ವಿಶ್ವನಾಥ್ ಕೆಲಸ ಎಂದು ಗುಡುಗಿದ್ರು.
ವಲಸಿಗ ಸಚಿವರು ಯಡಿಯೂರಪ್ಪರ ಪರವಾಗಿ ಇದ್ದಾರೆ. ಆದರೆ ಸೋತ ವಿಶ್ವನಾಥ್ರನ್ನ ಯಡಿಯೂರಪ್ಪರೇ ಎಂಎಲ್ಸಿ ಮಾಡಿದ್ದರೂ ಸಹ ವಿಶ್ವನಾಥ್ ಅವರ ವಿರುದ್ಧವೇ ಮಾತನಾಡ್ತಾರೆ. ಇವರು ತಮಗೆ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಹತಾಶರಾಗಿದ್ದಾರೆ. ಸಿಎಂರನ್ನ ಆಯ್ಕೆ ಮಾಡೋದು ಶಾಸಕರೇ ಹೊರತು ಎಂಎಲ್ಸಿಗಳಲ್ಲ ಎಂದು ಹೇಳಿದ್ದಾರೆ.