ದೇಶದಲ್ಲಿ ಇನ್ನೇನು ಕಾಲಿಡಲಿದೆ ಎನ್ನಲಾದ ಕೊರೊನಾ ಮೂರನೆ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದು ಏಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕೊರೊನಾ ಮೂರನೆ ಅಲೆಯ ವಿಚಾರವಾಗಿ ಮಾತನಾಡಿದ ಅವರು ನಾವು ಮೂರನೇ ಅಲೆಯನ್ನ ಎದುರಿಸಲು ಎರಡನೆ ಅಲೆಯಿಂದ ಕಲಿಯಬೇಕಾಗಿದೆ ಎಂದು ಹೇಳಿದ್ರು.
ಕೊರೊನಾ ಎರಡನೆ ಅಲೆಗಿಂತಲೂ ಮೂರನೇ ಅಲೆ ಭೀಕರವಾಗಿ ಇರಲಿದ್ಯಾ ಎಂಬ ಚರ್ಚೆ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ನನ್ನ ಅಭಿಪ್ರಾಯದ ಪ್ರಕಾರ ಮೂರನೇ ಅಲೆಯು ಎರಡನೆ ಅಲೆಯಷ್ಟು ಭೀಕರವಾಗಿ ಇರೋದಿಲ್ಲ ಎಂದು ಗುಲೇರಿಯಾ ಹೇಳಿದ್ರು.
ಪಾರ್ಕಿಂಗ್ ಮಾಡುವ ಟ್ರಿಕ್ ಹೇಳಿಕೊಟ್ಟ ʼಟಿಕ್ ಟಾಕರ್ʼ
ಕೊರೊನಾ ಮೂರನೆ ಅಲೆಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಇರಲಿದೆ. ಇದು ಕೊರೊನಾ ಎರಡನೆ ಅಲೆಗೆ ಕಾರಣವಾದ ಡೆಲ್ಟಾ ವೈರಸ್ಗಿಂತ ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ. ಸರ್ಕಾರವು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ರು.
ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ
ಭಾರತದಲ್ಲಿ ಸದ್ಯ ಕಾಣಿಸಿಕೊಂಡಿರುವ ಡೆಲ್ಟಾ ಪ್ಲಸ್ ರೂಪಾಂತರಿಯ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿದ್ದೇವೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನ ನಡೆಸಲಾಗುತ್ತಿದೆ ಎಂದು ಹೇಳಿದ್ರು.
ಕೊರೊನಾ ಲಸಿಕೆಯ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನೀವು ಕೊರೊನಾ ಲಸಿಕೆಯನ್ನ ಪಡೆದಲ್ಲಿ ನಿಮಗೆ ಸೋಂಕು ಬರೋದೇ ಇಲ್ಲ ಎಂದಲ್ಲ. ಆದರೆ ಸೋಂಕಿನ ದಾಳಿಗೆ ನೀವು ಗಂಭೀರ ಪ್ರಮಾಣದಲ್ಲಿ ತುತ್ತಾಗಲಾರಿರಿ ಎಂದು ಹೇಳಿದ್ದಾರೆ.