ಹಾಲು ಸೇವನೆಯಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಅದೇ ರೀತಿ ಹಾಲನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ನೀರಿಗೆ ಹಾಲನ್ನು ಬೆರೆಸಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ ಮಾಡುವುದರಿಂದ ಅದು ಎಂಟಿ ಏಜಿಂಗ್ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ. ನಮ್ಮ ತ್ವಚೆಗೆ ವಯಸ್ಸಾಗದಂತೆ ತಡೆಯುತ್ತದೆ. ಹಾಲು ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಸುಕ್ಕುಗಳು ನಿವಾರಣೆಯಾಗುತ್ತದೆ.
ನಿಮ್ಮ ಮುಖದಲ್ಲಿ ಸುಕ್ಕುಗಳಿದ್ದರೆ ಹಾಲಿನ ನೀರಿನಿಂದ ಸ್ನಾನ ಮಾಡಬಹುದು. ಪ್ರತಿನಿತ್ಯ ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ ಮಾಡಿದರೆ ಮೊಡವೆ ಸಮಸ್ಯೆ ದೂರವಾಗುತ್ತದೆ. ಮೊಡವೆಗಳ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ನೀರಿನಲ್ಲಿ ಹಾಲನ್ನು ಬೆರೆಸಿ ಮತ್ತು ಅದರಿಂದ ಫೇಸ್ ವಾಶ್ ಮಾಡಿ. ತ್ವಚೆಯ ಅಲರ್ಜಿಯ ಸಮಸ್ಯೆ ಇದ್ದರೆ ನೀರು ಮತ್ತು ಹಾಲಿನ ಮಿಶ್ರಣವನ್ನು ಮುಖಕ್ಕೆ ಹಚ್ಚಬಹುದು, ಹೀಗೆ ಮಾಡುವುದರಿಂದ ಅಲರ್ಜಿ, ತುರಿಕೆ ಇತ್ಯಾದಿ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.
ನೀರಿಗೆ ಹಾಲು ಹಾಕಿ ಸ್ನಾನ ಮಾಡಿದರೆ ಮುಖ ಮಾತ್ರವಲ್ಲದೇ ಇಡೀ ದೇಹದ ತ್ವಚೆ ಹೊಳೆಯುತ್ತದೆ. ಇದು ಚರ್ಮದ ಟ್ಯಾನಿಂಗ್ ಅನ್ನು ಸಹ ತೆಗೆದುಹಾಕುತ್ತದೆ. ಆದ್ದರಿಂದ ಟ್ಯಾನಿಂಗ್ ಸಮಸ್ಯೆ ಇರುವವರು ಕೂಡ ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ ಮಾಡಿ. ತ್ವಚೆ ಶುಷ್ಕವಾಗಿದ್ದರೆ, ಒಣ ತ್ವಚೆಯ ಸಮಸ್ಯೆಯಿದ್ದರೆ ಅದಕ್ಕೂ ಹಾಲಿನಲ್ಲಿ ಪರಿಹಾರವಿದೆ. ಸ್ನಾನದ ನೀರಿಗೆ ಅರ್ಧ ಲೋಟ ಹಾಲು ಸೇರಿಸಿ ಪ್ರತಿದಿನ ಸ್ನಾನ ಮಾಡಿ. ಇದು ಒಣ ತ್ವಚೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.