alex Certify Gruha Lakshmi Scheme : ಅಕೌಂಟ್ ಗೆ ‘ಗೃಹಲಕ್ಷ್ಮಿ’ ಹಣ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಯಜಮಾನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Gruha Lakshmi Scheme : ಅಕೌಂಟ್ ಗೆ ‘ಗೃಹಲಕ್ಷ್ಮಿ’ ಹಣ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಯಜಮಾನಿಯರು

ಬೆಂಗಳೂರು : ಮಹಿಳೆಯರಿಗೆ 2000 ರೂ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ನಿನ್ನೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ನಿನ್ನೆಯಿಂದಲೇ ಮಹಿಳೆಯರ ಖಾತೆಗೆ 2000 ರೂ. ಹಣ ಜಮಾ ಆಗುತ್ತಿದೆ.

ಅಕೌಂಟ್ ಗೆ ‘ಗೃಹಲಕ್ಷ್ಮಿ’ ಹಣ ಬರುತ್ತಿದ್ದಂತೆ ಸಿಎಂ ಹೆಸರಿನಲ್ಲಿ ಹಾಡು ಹೇಳಿ ಕುಣಿದು ಯಜಮಾನಿಯರು ಕುಪ್ಪಳಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ರಂಗೇನಹಳ್ಳಿಯಲ್ಲಿ ಮಹಿಳೆಯರು ಸಿಎಂ ಸಿದ್ಧರಾಮಯ್ಯ ಹೆಸರಲ್ಲಿ ಹಾಡು ಹೇಳುತ್ತ ನೃತ್ಯ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಕೆಲವು ಮಹಿಳೆಯರ ಖಾತೆಗೆ 2000 ರೂ ಹಣ ಬಂದಿರುವ ಮೆಸೇಜ್ ಬಂದಿದೆ ಇದರಿಂದ ಮಹಿಳೆಯರು ಖುಷಿಯಾಗಿದ್ದಾರೆ. ಸೆಪ್ಟೆಂಬರ್ 5 ರೊಳಗೆ ಎಲ್ಲಾ ಮಹಿಳೆಯರ ಖಾತೆಗೆ 2000 ರೂ ಹಣ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...