ಒಂದು ಮನೆಯ ಪಾರಿವಾಳವು ರಾಂಗ್ ರೂಟ್ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ ತಲುಪಿದ್ದು ಯುಎಸ್ನಲ್ಲಿ!
ಬಾಬ್ ರೇಸಿಂಗ್ ಪಾರಿವಾಳ ಸುಮಾರು ಮೂರು ವಾರಗಳ ಹಿಂದೆ ಗುರ್ನಸಿಯಿಂದ ಚಾನೆಲ್ ದ್ವೀಪದತ್ತ ಹೊರಟಿತು, ನಂತರ ಇಂಗ್ಲೆಂಡ್ನ ನಾರ್ತ್ ಈಸ್ಟ್ನಲ್ಲಿರುವ ಮನೆಗೆ ಹಿಂತಿರುಗಬೇಕಿತ್ತು. ಈ ಪ್ರಯಾಣವು ಸುಮಾರು 10 ಗಂಟೆಗಳ ಕಾಲ ಸಾಕಾಗಿತ್ತು. ಆದರೆ, ಪಾರಿವಾಳ ನಾಪತ್ತೆಯಾಯಿತು. ಕೊನೆಗೆ ಅಲಬಾಮಾದ ಮನ್ರೋ ಕೌಂಟಿಯ ಮೆಕ್ಸಿಯಾದಲ್ಲಿನ ತನ್ನ ತೋಟದಲ್ಲಿ ವೃದ್ಧ ವ್ಯಕ್ತಿಯು ಪಾರಿವಾಳವನ್ನು ಕಂಡುಕೊಂಡ ನಂತರ ಈ ರಹಸ್ಯ ಬಯಲಾಯಿತು.
ಆತ ಪಾರಿವಾಳದ ಲೆಗ್ ಬ್ಯಾಂಡ್ ತೆಗೆದಾಗ ಇದು ಸಮುದ್ರದಾಚೆಗಿನ ಇಂಗ್ಲೆಂಡ್ನದ್ದು ಎಂದು ಬಹಿರಂಗವಾಯಿತು. ಬಳಿಕ ಅದನ್ನು ಪಶುವೈದ್ಯರಿಂದ ವೈದ್ಯಕಿಯ ತಪಾಸಣೆಗೆ ಒಳಪಡಿಸಲಾಯಿತು. ಪಾರಿವಾಳವನ್ನು ಸದ್ಯ ಕಾಳಜಿಯಿಂದ ಆರೈಕೆ ಮಾಡಲಾಗುತ್ತಿದೆ.
ವೆಬ್ಕ್ಯಾಮ್ ಮೂಲಕ ಪಾರಿವಾಳವು ತನ್ನ ಮಾಲೀಕರೊಂದಿಗೆ ಮತ್ತೆ ಸೇರಿಕೊಂಡಿದೆ. ಪಾರಿವಾಳ ಮಾಲಿಕ ಅಲನ್ ತನ್ನ ಪಾರಿವಾಳವನ್ನು ಮರಳಿ ತರಲು ಅಮೇರಿಕಾಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದಾನೆ ಎಂದು ವರದಿಯಾಗಿದೆ.
ಅಲನ್ ತನ್ನ ಪಾರಿವಾಳವು ರಾಂಗ್ ಟರ್ನ್ ಪಡೆದುಕೊಂಡಿತು, ಅದು ಹಡಗಿನಲ್ಲಿ ಇಳಿದಿರಬೇಕು ಎಂದು ಭಾವಿಸಿದ್ದಾನೆ. ಹೀಗಾಗಿ ಹಡಗಿನೊಂದಿಗೆ ಅದು ಅಟ್ಲಾಂಟಿಕ್ ಅನ್ನು ದಾಟಿದೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಹಾಗೆಯೇ ಸಂಪರ್ಕಕ್ಕೆ ಸಿಕ್ಕಿರುವುದಕ್ಕೆ ಸಮಾಧಾನಪಟ್ಟಿದ್ದಾನೆ.