ಸಾಮಾನ್ಯವಾಗಿ ಸಾಕಿದ ಶ್ವಾನಗಳು ನಾಪತ್ತೆಯಾದರೆ ಅದರ ಮಾಲೀಕರಿಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಪ್ರೀತಿಯ ಶ್ವಾನವನ್ನ ಹುಡುಕಾಡಲು ಮಾಲೀಕರು ಇನ್ನಿಲ್ಲದ ಪ್ರಯತ್ನವನ್ನ ಮಾಡುತ್ತಾರೆ.
ಅನೇಕ ಪ್ರಕರಣಗಳಲ್ಲಿ ನಾಪತ್ತೆಯಾದ ಶ್ವಾನಗಳನ್ನ ಹುಡುಕುವಲ್ಲಿ ಮಾಲೀಕರು ಯಶಸ್ವಿಯಾಗುವುದು ಇದೆ. ಆದರೆ ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದ ಪ್ರಕರಣವೊಂದರಲ್ಲಿ ನಾಪತ್ತೆಯಾದ ಶ್ವಾನವೊಂದು ಡಿಫರೆಂಟ್ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದು ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರೀತಿಯ ಸಾಕು ಶ್ವಾನ ರಾಜಾ ನಾಪತ್ತೆಯಾದ ಬಳಿಕ ಮೇರಿ ಲ್ಯಾನ್ ಎಂಬವರ ದುಃಖದ ಕಟ್ಟೆ ಒಡೆದು ಹೋಗಿತ್ತು. 23 ವರ್ಷದ ಮೇರಿ ತನ್ನ ಸಾಕು ಶ್ವಾನಕ್ಕಾಗಿ ನೆರೆಹೊರೆಯವರನೆಲ್ಲ ವಿಚಾರಿಸಿದ್ದರು. ಆದರೆ ಎಷ್ಟು ಮಾಡಿದರೂ ಶ್ವಾನವನ್ನ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ಕೊರೊನಾ ಲಸಿಕೆ ನಂತ್ರ ಬೇರೆ ಬೇರೆ ವಯಸ್ಸಿನವರನ್ನು ಕಾಡ್ತಿದೆ ವಿವಿಧ ಸಮಸ್ಯೆ
ಏರಿಯಾದ ತುಂಬೆಲ್ಲ ನಾಯಿ ಕಾಣೆಯಾಗಿದೆ ಎಂದು ಬೋರ್ಡ್ ಅಂಟಿಸಿದ್ದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ಆದರೆ ಆಶ್ಚರ್ಯಕರ ಎಂಬಂತೆ ಈ ಶ್ವಾನವು ಮುಂಜಾನೆ 3 ಗಂಟೆ ಸುಮಾರಿಗೆ ಮನೆಯ ಡೋರ್ ಬೆಲ್ನ್ನು ಬಾರಿಸಿ ಎಂಟ್ರಿ ಕೊಟ್ಟಿದೆ..!
ಶ್ವಾನ ಮನೆಯ ಬೆಲ್ ಬಾರಿಸುತ್ತಿರುವ ದೃಶ್ಯ ಡೋರ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಏರಿಯಾದಲ್ಲಿ ಪಟಾಕಿಗಳನ್ನ ಸಿಡಿಸಿದ ಬಳಿಕ ಶ್ವಾನ ಮನೆಗೆ ಹಿಂದಿರುಗಿದೆ ಎಂದು ಮಾಲೀಕೆ ಹೇಳಿದ್ದಾರೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಫಾ. ಸ್ಟಾನ್ ಸ್ವಾಮಿ ವಿಧಿವಶ
ಏರಿಯಾದಲ್ಲಿದ್ದವರೆಲ್ಲ ಪಟಾಕಿ ಸಿಡಿಸಲು ಆರಂಭಿಸಿದ್ರು. ಆಕೆ ಪಟಾಕಿಗೆ ಹೆದರುತ್ತಿದ್ದಳು. ಹೀಗಾಗಿ ಆಕೆ ವಾಪಸ್ ಮನೆಗೆ ಬರ್ತಾಳೆ ಎಂಬ ನಂಬಿಕೆ ನನಗಿತ್ತು ಎಂದು ಮೇರಿ ಹೇಳಿದ್ದಾರೆ.
ಆದರೆ ಶ್ವಾನವು ಡೋರ್ ಬೆಲ್ ಬಾರಿಸೋದನ್ನ ಯಾವಾಗ ಕಲಿಯಿತು ಅನ್ನೋದು ನನಗೆ ತಿಳಿದಿಲ್ಲ. ಇದನ್ನ ನಾವು ಆಕೆಗೆ ಕಲಿಸಿಯೇ ಇರಲಿಲ್ಲ ಎಂದು ಆಶ್ಚರ್ಯ ಹೊರಹಾಕಿದ್ದಾರೆ.