alex Certify ಪ್ರಿಯಾಂಕ ಚೋಪ್ರಾ ಬಯೋಪಿಕ್ ನಲ್ಲಿ ಭುವನ ಸುಂದರಿ ಹರ್ನಾಜ಼್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಾಂಕ ಚೋಪ್ರಾ ಬಯೋಪಿಕ್ ನಲ್ಲಿ ಭುವನ ಸುಂದರಿ ಹರ್ನಾಜ಼್…?

ಭುವನಸುಂದರಿ ಪಟ್ಟಕ್ಕೇರಿರುವ ಹರ್ನಾಜ಼್ ಸಂದು ಪ್ರಿಯಾಂಕ ಚೋಪ್ರಾ ಅಪ್ಪಟ ಅಭಿಮಾನಿ ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ‌. ಪ್ರಿಯಾಂಕ ವಿಶ್ವಸುಂದರಿ ಕಿರೀಟ ಗೆದ್ದ ವರ್ಷದಲ್ಲೆ ಅಂದರೆ 2000 ದಲ್ಲಿ ಹುಟ್ಟಿರುವ ಹರ್ನಾಜ಼್ ಪ್ರಿಯಾಂಕ ಚೋಪ್ರಾ ಅವ್ರನ್ನ ತನ್ನ ಆದರ್ಶ ವ್ಯಕ್ತಿ ಎನ್ನುತ್ತಾರೆ.

ತಮ್ಮ ಮಿಸ್ ಯೂನಿವರ್ಸ್ ನ ಪ್ರಶ್ನೋತ್ತರ ರೌಂಡ್ ನಲ್ಲಿ, ನಿಮ್ಮ ಇನ್ಸ್ಪಿರೇಷನ್ ಯಾರು ಎಂದು ಕೇಳಿದಾಗ ಥಟ್ ಅಂತಾ ಪ್ರಿಯಾಂಕ ಹೆಸರು ಹೇಳಿದ ಹರ್ನಾಜ಼್, ಅವರು ಭಾರತದ ಹೆಮ್ಮೆ. ಅವರು ನಡೆದು ಬಂದ ಹಾದಿ ನನ್ನನ್ನು ಸದಾ ದೇಶದ ಗೌರವ ಹೆಚ್ಚಿಸಲು ಪ್ರೋತ್ಸಾಹ ನೀಡುತ್ತದೆ ಎಂದು ಉತ್ತರಿಸಿದ್ದರು.

ಮಾಡೆಲಿಂಗ್ ಜೊತೆ ಆಕ್ಟಿಂಗ್ ನಲ್ಲು ಆಸಕ್ತಿ ಇರುವ ಹರ್ನಾಜ಼್ ಈಗಾಗಲೇ ಎರಡು ಪಂಜಾಬಿ‌ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ‌. ಸಂದರ್ಶನವೊಂದರಲ್ಲಿ, ಯಾರದ್ದಾದರು ಆತ್ಮಕಥನಕ್ಕೆ ನಾಯಕಿಯಾಗುವ ಅವಕಾಶ ಸಿಕ್ಕರೆ ಅದು ಯಾವುದು ಎಂದು ಕೇಳಿದಾಗ, ಹರ್ನಾಜ಼್ ಹೇಳಿದ ಉತ್ತರ ಪ್ರಿಯಾಂಕ ಚೋಪ್ರಾ. ಪ್ರಿಯಾಂಕ ಬಯೋಪಿಕ್ ನಲ್ಲಿ ಅವಕಾಶ ಸಿಕ್ಕರೆ ಅದನ್ನು ಬಿಡುವ ಮಾತಿಲ್ಲ, ಆ ಚಿತ್ರದ ಭಾಗವಾಗಲು ನಾನು ಬಯಸುತ್ತೇನೆ ಎಂದು ಭುವನ ಸುಂದರಿ ಹರ್ನಾಜ಼್ ಹೇಳಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...