
ಹಾಸನ: ರಾಜ್ಯದಲ್ಲಿ ಹಸು, ಕರುಗಳ ಮೇಲಿನ ಹಲ್ಲೆ ಪ್ರಕರಣ ಮುಂದುವರೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ.
ನವೀನ್ ಎಂಬುವವರಿಗೆ ಸೇರಿದ ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು. ದುಷ್ಕರ್ಮಿಗಳು ಕೊಟ್ಟಿಗೆಗೆ ಬಂದು ಕರುವಿನ ಮೇಲೆ ಮಚ್ಚು ಬೀಸಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಕರು ರಕ್ತದ ಮಡುವಲ್ಲಿ ನರಳಾಡಿದೆ.
ಈ ಹಿಂದೆ ಕೂಡ ನವೀನ್ ಅವರಿಗೆ ಸೇರಿದ್ದ ಜಾನುವಾರುಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಇದೀಗ ಕೊಟ್ಟಿಗೆಗೆ ನುಗ್ಗಿ ದುರುಳರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪಶುವೈದ್ಯರು ಕರುವಿಗೆ ಚಿಕಿತ್ಸೆ ನೀಡಿದ್ದಾರೆ.