ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಹಿಂಸಾತ್ಮಕ ರೂಪ ಪಡೆದ ಪರಿಣಾಮ 12 ವರ್ಷದ ಬಾಲಕನ ನಾಲಗೆಯನ್ನು ಪಕ್ಕದ ಮನೆಯವು ಕತ್ತರಿಸಿದ ಭಯಾನಕ ಘಟನೆಯು ಉತ್ತರ ಪ್ರದೇಶದ ಬುಲಂದ್ಶಹರ್ನ ಖುರ್ಚಾ ಎಂಬಲ್ಲಿ ನಡೆದಿದೆ.
ಇಬ್ಬರು ಬಾಲಕರ ನಡುವೆ ಜಗಳ ನಡೆಯುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಜಗಳದಲ್ಲಿ ಕುಟುಂಬಸ್ಥರೂ ಭಾಗಿಯಾಗಿದ್ದರಿಂದ ಇದು ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಮೊದಲು ಮಾತಿನ ಜಟಾಪಟಿಯಲ್ಲೇ ಇದ್ದ ಈ ಜಗಳ ಕ್ರಮೇಣ ಕೈ ಕೈ ಮಿಲಾಯಿಸುವವರೆಗೂ ತಲುಪಿದೆ. ಕೊನೆಗೆ ಓರ್ವ ಬಾಲಕನ ನಾಲಗಯನ್ನೇ ಕತ್ತರಿಸಲಾಗಿದೆ. ಮತ್ತೊಬ್ಬ ಬಾಲಕನನ್ನು ತಳ್ಳಲಾಗಿದ್ದು ಆತನ ತಲೆಗೆ ಗಾಯವಾಗಿದೆ.
ಬಾಯಿಯಲ್ಲಿ ಗಾಯವಾಗಿದ್ದರೂ ಸಹ ಕಷ್ಟಪಟ್ಟು ಮಾತನಾಡಿದ ಅಪ್ರಾಪ್ತ ಬಾಲಕ, ಈ ಘಟನೆಯಲ್ಲಿ ನನ್ನ ತಪ್ಪು ಏನೂ ಇರಲಿಲ್ಲ. ನನ್ನ ಪಕ್ಕದ ಮನೆಯವರಾದ ಕುಲದೀಪ್ ಹಾಗೂ ಸಚಿನ್ ಸ್ನೇಹಿತರ ಜೊತೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.
ಈ ಸಂಬಂಧ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಾಲಗೆ ಕತ್ತರಿಸಿ ಹೋದ ಬಾಲಕನಿಗೆ ಶಸ್ತ್ರಚಿಕಿತ್ಸೆ ಮುಂದುವರಿದಿದೆ. ತಲೆಗೆ ಗಾಯವಾದ ಬಾಲಕನನ್ನು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.