alex Certify ಬೆಚ್ಚಿ ಬೀಳಿಸುವಂತಿದೆ ಈ ಘಟನೆ: 6 ತಿಂಗಳ ಅವಧಿಯಲ್ಲಿ ಅಪ್ರಾಪ್ತೆ ಮೇಲೆ 400 ಮಂದಿಯಿಂದ ಅತ್ಯಾಚಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ಈ ಘಟನೆ: 6 ತಿಂಗಳ ಅವಧಿಯಲ್ಲಿ ಅಪ್ರಾಪ್ತೆ ಮೇಲೆ 400 ಮಂದಿಯಿಂದ ಅತ್ಯಾಚಾರ….!

ಆರು ತಿಂಗಳಲ್ಲಿ 400 ಮಂದಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಸಂಬಂಧ ದೂರು ದಾಖಲಿಸಲು ಪ್ರಯತ್ನಿಸಿದ ವೇಳೆಯಲ್ಲಿ ಪೊಲೀಸರು ಸಹ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಂತೆ..! ಅಂದ ಹಾಗೆ ಆಕೆ ಈಗ 2 ತಿಂಗಳ ಗರ್ಭಿಣಿ.

ಬಾಲಕಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಸ್ಕೋ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಪ್ರಾಪ್ತೆ ದಾಖಲಿಸಿರುವ ದೂರಿನ ಪ್ರಕಾರ, ಕೆಲ ವರ್ಷಗಳ ಹಿಂದೆ ಬಾಲಕಿ ತಾಯಿಯನ್ನು ಕಳೆದುಕೊಂಡಿದ್ದಳು. ಆಕೆಯ ತಂದೆ 8 ತಿಂಗಳ ಹಿಂದೆ ಆಕೆಯ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ಆಕೆಯ ಪತಿ ಹಾಗೂ ಅತ್ತೆ-ಮಾವ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದರು.

ರುಚಿ ರುಚಿ ‘ಹಾಲು‌ ಪಾಯಸ’ ಮಾಡುವ ವಿಧಾನ

ಇದರಿಂದ ಬೇಸತ್ತಿದ್ದ ಅಪ್ರಾಪ್ತೆ ತವರಿಗೆ ಮರಳಿದ್ದಳು. ಆದರೆ ತಂದೆಯು ಆಕೆಯನ್ನು ಮನೆಯಲ್ಲಿ ಇರಿಸಿಕೊಳ್ಳಲು ಇಚ್ಚಿಸದ ಹಿನ್ನೆಲೆಯಲ್ಲಿ ಆಕೆಯ ಅಂಬಾಗೋಜಾಯ್​​ನ ಬಸ್​ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಳು. ಈ ಅವಧಿಯಲ್ಲಿ ಆಕೆ ಸಾಕಷ್ಟು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದಾಳೆ.

ನನ್ನ ಮೇಲೆ ಅನೇಕರು ಅತ್ಯಾಚಾರ ಎಸೆಗಿದ್ದಾರೆ. ಈ ಸಂಬಂಧ ದೂರು ನೀಡಲು ನಾನು ಸಾಕಷ್ಟು ಬಾರಿ ಪೊಲೀಸ್​ ಠಾಣೆಗೆ ಬಂದಿದ್ದೆ. ಆದರೆ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ನನ್ನ ಮೇಲೆಯೇ ದೌರ್ಜನ್ಯ ಎಸಗಿದ್ರು ಎಂದು ಹೇಳಿದ್ದಾಳೆ.

ಕೊನೆಗೂ ಈ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ತನಿಖೆಗೆ ಚುರುಕು ನೀಡಲಾಗಿದ್ದು ಈಗಾಗಲೇ ಮೂವರನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...