ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು ಹರಿಯಾಣಾದ ಫರೀದಾಬಾದ್ ಜಿಲ್ಲೆಯಲ್ಲಿ ಘಟಿಸಿದೆ.
ಜುಲೈ 10-11ರ ರಾತ್ರಿಯಲ್ಲಿ ಈ ಕೊಲೆ ನಡೆದಿದೆ. ವಿಡಿಯೋ ಕರೆ ಮುಖಾಂತರ ತನ್ನ ಬಾಯ್ಫ್ರೆಂಡ್ ಕೊಟ್ಟ ನಿದೇರ್ಶನನಾನುಸಾರ ತನ್ನ ತಾಯಿಯನ್ನು ಈ ಹುಡುಗಿ ಕೊಲೆ ಮಾಡಿದ್ದಾಳೆ.
ಕ್ಯಾಬ್ ಚಾಲಕನಿಗೆ ಥಳಿಸಿದ್ದ ಯುವತಿಯ ಮತ್ತೊಂದು ಕಿರಿಕ್ ವಿಡಿಯೋ ವೈರಲ್..!
ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇಬ್ಬರನ್ನೂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಹುಡುಗನನ್ನು ಫರೀದಾಬಾದ್ ಜೈಲಿಗೆ ಕಳುಹಿಸಲಾಗಿದ್ದು, ಹುಡುಗಿಯನ್ನು ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದೆ.