
ವಾಹನದ ಹಿಂಭಾಗದಲ್ಲಿ ಅಸಾಮಾನ್ಯ ಸಂದೇಶಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಮನಸ್ಸಿನಲ್ಲಿ ಇರುವ ಭಾವನೆಗಳನ್ನು ತಮ್ಮ ತಮ್ಮ ವಾಹನಗಳ ಹಿಂಭಾಗ ಅಥವಾ ಮುಂಭಾಗದಲ್ಲಿ ಅಕ್ಷರ ರೂಪಕ್ಕೆ ಇಳಿಸುವುದು ಸಾಮಾನ್ಯ.
ಅಂಥದ್ದೇ ಒಂದು ಬರಹದ ಫೋಟೋ ಈಗ ವೈರಲ್ ಆಗಿದೆ. ಆದರೆ ಇಲ್ಲಿರುವ ಬರಹ ನೀವು ನಿರೀಕ್ಷಿಸಿದಂತೆ ಅಲ್ಲ. ಚಿತ್ರವು ಬಿಳಿ ಮಿನಿ ಟ್ರಕ್ ಅನ್ನು ತೋರಿಸುತ್ತದೆ. ಅದರ ಹಿಂಭಾಗದಲ್ಲಿ “ಬಡೆ ಹೋಕರ್ ಫೆಮಿನಿಸ್ಟ್ ಬನುಂಗಾ” ಎಂದು ಬರೆಯಲಾಗಿದೆ. ಇದರ ಅರ್ಥ “ನಾನು ದೊಡ್ಡವನಾದಾಗ, ನಾನು ಸ್ತ್ರೀವಾದಿಯಾಗುತ್ತೇನೆ” ಎಂದು !
ವಾಹನವನ್ನು ಯಾರು ಹೊಂದಿದ್ದಾರೆ ಅಥವಾ ಚಿತ್ರವನ್ನು ಎಲ್ಲಿ ತೆಗೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಒಂದು ವಿಷಯ ಖಚಿತವಾಗಿದೆ – ಈ ವಾಹನವು ಅನಿರೀಕ್ಷಿತ ಇಂಟರ್ನೆಟ್ ಸಂವೇದನೆಯಾಗಿದೆ. ಈ ಸ್ನ್ಯಾಪ್ ಅನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರು, ನನಗೂ ಇದೇ ಆಸೆ ಇದೆ ಎಂದು ಬರೆದುಕೊಂಡಿದ್ದು, ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.