alex Certify ಗರ್ಬಾ ಕಾರ್ಯಕ್ರಮದಲ್ಲಿ ಮಿಂಚಿದ ಸುಮೇಧ್ ಶಿಂಧೆ; ಖ್ಯಾತ ಬಾಲಿವುಡ್ ನಟರ ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಬಾ ಕಾರ್ಯಕ್ರಮದಲ್ಲಿ ಮಿಂಚಿದ ಸುಮೇಧ್ ಶಿಂಧೆ; ಖ್ಯಾತ ಬಾಲಿವುಡ್ ನಟರ ಮಿಮಿಕ್ರಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಕಲಾವಿದ

ನವರಾತ್ರಿ ಹತ್ತು ಹಲವಾರು ವಿಶೇಷತೆಗಳಿಂದ ಕೂಡಿರುವ ಹಬ್ಬ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಮಾಡುವ ಗರ್ಬಾ ನೃತ್ಯ ಅದ್ಭುತವಾಗಿರುತ್ತೆ. ಈ ಗರ್ಬಾ ನೃತ್ಯದ ಸಮಯದಲ್ಲಿ ಜನರನ್ನ ಮನರಂಜಿಸುವುದಕ್ಕಂತಾನೇ ಇನ್ನೂ ಭಿನ್ನ ಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರಲಾಗುತ್ತೆ. ಅದರಲ್ಲಿ ಮಿಮಿಕ್ರಿ ಕಾರ್ಯಕ್ರಮ ಕೂಡಾ ಒಂದು.

ಇತ್ತೀಚೆಗೆ ಗರ್ಬಾ ಕಾರ್ಯಕ್ರಮವೊಂದರಲ್ಲಿ ಸುಮೇಧ್ ಶಿಂಧೆ ಮಾಡಿರುವ ಮಿಮಿಕ್ರಿ ಸಖತ್ ವೈರಲ್ ಆಗಿದೆ. ಇವರು ಹೃತಿಕ್ ರೋಷನ್, ರಣವೀರ್ ಸಿಂಗ್, ಅಮಿರ್​ಖಾನ್, ಜಾನ್ ಅಬ್ರಹಾಂ ಹಾಗೂ ಇನ್ನಿತರೇ ಕಲಾವಿದರ ಧ್ವನಿಯನ್ನ ಮಿಮಿಕ್ರಿ ಮಾಡಿ ಜನರನ್ನ ರಂಜಿಸಿದ್ದಾರೆ.

ಅದರಲ್ಲೂ ಗಾಯಕ ಸೋನು ನಿಗಮ್ ಅವರ ಮಿಮಿಕ್ರಿಯಂತೂ ಯಥಾವತ್ ಮಾಡಿ ತೋರಿಸಿ, ಅಭಿಮಾನಿಗಳ ಚಪ್ಪಾಳೆಯನ್ನ ಗಿಟ್ಟಿಸಿಕೊಂಡಿದ್ಧಾರೆ.

ಸುಮೇಧ್ ಶಿಂಧೆ ಇತ್ತೀಚೆಗೆ ತಮ್ಮ ಮಿಮಿಕ್ರಿ ವಿಡಿಯೋವನ್ನ ಟ್ವಿಟರ್ ಅಕೌಂಟ್​​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಹೃತಿಕ್ ರೋಷನ್, ಅಜಯ್ ದೇವಗನ್, ಅಮೀರ್ ಖಾನ್, ಪಂಕಜ್ ತ್ರಿಪಾಠಿ, ಅನಿಲ್ ಕಪೂರ್, ಅಕ್ಷಯ್ ಖನ್ನಾ, ಇಮ್ರಾನ್ ಹಶ್ಮಿ, ಅಭಿಷೇಕ್ ಬಚ್ಚನ್ ಮತ್ತು ಶಾರುಖ್ ಅವರಂತಹ ವಿವಿಧ ನಟರ ಮಿಮಿಕ್ರಿಯನ್ನ ಮಾಡಿರುವುದನ್ನ ನೋಡಬಹುದಾಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ `ನಮ್ಮ ಬಾಲಿವುಡ್ ನಟರು ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದರೆ ಅವರ ವರ್ತನೆ ಹೇಗಿರುತ್ತೆ. ಅಂತ ನೋಡಿ` ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನ ಈಗಾಗಲೇ 70,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕಾಮೆಂಟ್ ಬಾಕ್ಸ್​ನಲ್ಲಿ, ಇದು ಅದ್ಭುತ ಮಿಮಿಕ್ರಿ ಎಂದು​​ ಬರೆದಿದ್ದಾರೆ. ಇನ್ನೊಬ್ಬರು ಪ್ರಸಿದ್ಧ ವ್ಯಕ್ತಿಗಳ ಹೊರತು ಪಡೆಸಿ ಜನಸಾಮಾನ್ಯರದ್ದೂ ಮಿಮಿಕ್ರಿ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

ಸದ್ಯಕ್ಕೆ ಬೇರೆ ಬೇರೆ ನಟರ ಮಿಮಿಕ್ರಿ ಮಾಡಿರುವ ಶಿಂಧೆ ಈಗ ಬ್ರಹ್ಮಾಸ್ತ್ರದ ಕುರಿತು ಬೇರೆ ಬೇರೆ ನಟರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೊ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರಿಗೆ 19 ಸಾವಿರಕ್ಕೂ ಹೆಚ್ಚು ಜನರು ಫಾಲೋವರ್ಸ್​ಗಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...