ಹಾಲಿನ ಟ್ಯಾಂಕರ್ ಒಂದು ಉರುಳಿಬಿದ್ದ ವೇಳೆ ಪುಕ್ಕಟ್ಟೆ ಹಾಲು ತುಂಬಿಸಿಕೊಳ್ಳಲು ಜನ ಮುಗಿಬಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಿರೋಹಿಯ ಸ್ವರೂಪ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ವೇ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಏಕಾಏಕಿ ನುಗ್ಗಿದ ಬೈಕ್ ಚಾಲಕನನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ.
ಉರುಳಿಬಿದ್ದ ಟ್ಯಾಂಕರ್ ನಿಂದ ಹಾಲು ಸುರಿಯುತ್ತಿದ್ದಂತೆ ಜನ ಬಾಟಲ್, ಕೊಡಪಾನ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಬಂದು ಹಾಲು ತುಂಬಿಸಿಕೊಂಡಿದ್ದಾರೆ.