ಮೈಸೂರು: ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಟಿ. ನರಸೀಪುರ ಎಪಿಎಂಸಿ ಆವರಣದಲ್ಲಿ ಮೈಮುಲ್ ನಿಂದ 1.15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಒಕ್ಕೂಟದ ಉಪ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್ ಗೆ 5 ರೂ. ಹೆಚ್ಚಳ ಮಾಡಲಾಗುವುದು. ಜನವರಿಯಿಂದ ಇದನ್ನು ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಲೀಟರ್ ಹಾಲಿಗೆ ಪ್ರಸ್ತುತ 33 ರೂಪಾಯಿ ಕೊಡಲಾಗುತ್ತಿದೆ. ಈ ಹಿಂದೆ 35 ರೂಪಾಯಿ ಇತ್ತು. ಖರೀದಿ ದರ 5 ರೂಪಾಯಿ ಹೆಚ್ಚಳ ಮಾಡಲು ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅವರ ಸೂಚನೆಯಂತೆ ಹೊಸ ವರ್ಷದ ಕೊಡುಗೆಯಾಗಿ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಹೆಚ್ಚುವರಿ ಆಗಿ ನೀಡಲಾಗುವುದು. ಐದು ರೂಪಾಯಿ ಪೂರ್ಣವಾಗಿ ರೈತರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.