ಕೋಚಿಮುಲ್ ನಿಂದ ಹಾಲು ಉತ್ಪಾದಕರಿಗೆ ಬಿಗ್ ಶಾಕ್ ನೀಡಲಾಗಿದ್ದು, ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿ ಕಡಿತಗೊಳಿಸಲಾಗಿದೆ.
ನಾಳೆ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಹಾಲು ಖರೀದಿ ದರ 2 ರೂ. ಕಡಿತಗೊಳಿಸಿ ಕೋಚಿಮುಲ್ ನಿಂದ ಆದೇಶ ಹೊರಡಿಸಲಾಗಿದೆ. ಏಕಾಏಕಿ 2 ರೂಪಾಯಿ ಕಡಿತಗೊಳಿಸಲಾಗಿದ್ದು, ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಗೆ 31.40 ರೂಪಾಯಿ ನೀಡಲು ಆದೇಶ ನೀಡಲಾಗಿದೆ.
ಹಾಲು ಉತ್ಪಾದಕರಿಗೆ ಈ ಮೊದಲು 33.40 ರೂ. ನೀಡಲಾಗುತ್ತಿತ್ತು. ಜನವರಿಯಲ್ಲಿ ಪ್ರತಿದಿನ ಕೋಚಿಮುಲ್ ನಲ್ಲಿ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಜೂನ್ ನಿಂದ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.