ಬೆಂಗಳೂರು: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆಎಂಎಫ್ ನಂದಿನಿ ಹಾಲು ಗ್ರಾಹಕರಿಗೆ ಒಂದು ತಿಂಗಳು ಹೆಚ್ಚುವರಿ ಹಾಲು ನೀಡಲಾಗುತ್ತದೆ.
ಒಂದು ಲೀಟರ್ಗೆ 40 ಮಿ.ಲೀ. ಮತ್ತು ಅರ್ಧ ಲೀಟರಿಗೆ 20 ಎಂ.ಲೀ. ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಎಲ್ಲ ಶ್ರೇಣಿಯ ನಂದಿನಿ ಹಾಲಿನ ಗ್ರಾಹಕರಿಗೆ ಹೆಚ್ಚುವರಿ ಹಾಲು ಒಂದು ತಿಂಗಳ ಕಾಲ ಪೂರೈಕೆಯಾಗಲಿದೆ. ಕೊರೋನಾ ಲಾಕ್ ಡೌನ್ ಕಾರಣದಿಂದ ಹೆಚ್ಚುವರಿ ಹಾಲು ಸಂಗ್ರಹವಾಗುತ್ತಿದೆ. ಇದರಿಂದಾಗಿ ಕೆಎಂಎಫ್ ವ್ಯಾಪ್ತಿಯ 14 ಹಾಲು ಒಕ್ಕೂಟ ಮತ್ತು 5 ಘಟಕಗಳಿಂದ ನಂದಿನಿ ಹಾಲಿನ ಪ್ರತಿ ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕ್ ಗಳಲ್ಲಿ ಹೆಚ್ಚುವರಿ ಹಾಲು ಪೂರೈಕೆ ಮಾಡಲಾಗುತ್ತದೆ. ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.