ನವದೆಹಲಿ: ಡೆಹ್ರಾಡೂನ್ ನಲ್ಲಿನ ಪ್ರತಿಷ್ಠಿತ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶಕ್ಕಾಗಿ ಡಿ. 18ರಂದು ನಡೆಯುವ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕೂಡ ಭಾಗವಹಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಅಗತ್ಯ ನಿರ್ದೇಶನ ಇರುವ ಜಾಹೀರಾತನ್ನು ಮುಂದಿನ ಎರಡು ದಿನಗಳಲ್ಲಿ ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ
ಈಗಾಗಲೇ ಭಾರತೀಯ ಸೇನಾಪಡೆ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆಗಳು, ತರಬೇತಿ ಕೇಂದ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಸೂಕ್ತ ಮಾನದಂಡಗಳನ್ನು ಕೇಂದ್ರ ಸರಕಾರ ಸಿದ್ಧಪಡಿಸುತ್ತಿದೆ. ಇಷ್ಟು ದೂರ ನಡೆದಿರುವ ಕೇಂದ್ರ ಸರಕಾರವು ಮತ್ತೊಂದು ಹೆಜ್ಜೆ ಮುಂದಿಡಬೇಕಿದೆ.
ʼಆಂಡ್ರಾಯ್ಡ್ʼ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್
100 ವರ್ಷಗಳನ್ನು ಪೂರೈಸುವ ಅಂಚಿನಲ್ಲಿರುವ ಆರ್ಐಎಂಸಿ ಲಿಂಗ ಸಮಾನತೆಯ ಸಮಾರಂಭವನ್ನು ಕೂಡ ಆಚರಿಸಲಿ ಎನ್ನುವುದು ನಮ್ಮ ನಿರೀಕ್ಷೆ ಎಂದು ನ್ಯಾ. ಎಸ್.ಕೆ. ಕೌಲ್ ಅವರ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ರಾಷ್ಟ್ರೀಯ ಮಿಲಿಟರಿ ಶಾಲೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ದಾಖಲಾತಿಯು 2022-23ನೇ ಶೈಕ್ಷಣಿಕ ಸಾಲಿನಿಂದ ಆರಂಭಗೊಳ್ಳುವ ನಿರೀಕ್ಷೆಯಿದೆ.