ಫೆರಾರಿ ಕಾರ್ ಬ್ರ್ಯಾಂಡ್ ಜಗತ್ತಿನ ಗಮನ ಸೆಳೆದಿದೆ. ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರೂ ಸಹ ಹೌದು. 1996 ರಲ್ಲಿ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಕೂಡ ಅತಿ ಅಪರೂಪದ ಫೆರಾರಿ ಎಫ್50 ಅನ್ನು ಖರೀದಿಸಿದ್ದರು.
ಫೆರಾರಿ ಎಫ್50 ಉತ್ಪಾದನೆಯು ಕೇವಲ 349 ಯೂನಿಟ್ಗೆ ಮಾತ್ರ ಸೀಮಿತವಾಗಿತ್ತು ಮತ್ತು ಇವುಗಳಲ್ಲಿ ಕೇವಲ 73 ಮಾತ್ರ ಯುಎಸ್ ಮಾರುಕಟ್ಟೆಗೆ ಕಾಯ್ದಿರಿಸಲಾಗಿತ್ತು.
ಇತ್ತೀಚೆಗೆ ಈ ಕಾರನ್ನು ಹರಾಜಿಗೆ ಇಡಲಾಗಿತ್ತು. ಕುತೂಹಲಕಾರಿ ಎಂದರೆ, ಇದು 4.2 ಮಿಲಿಯನ್ ಯುಎಸ್ ಡಾಲರ್ಗೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. 33 ಕೋಟಿ ರೂ. ಬೆಲೆಯ ಫೆರಾರಿ ಎಫ್50 ಕುರಿತು ಮಾತನಾಡುವುದಾದರೆ, ಇದು 60-ವಾಲ್ವ್ 4.7ಎಲ್ 65-ಡಿಗ್ರಿ 12 ಪವರ್ ಪ್ಲಾಂಟ್ ಅನ್ನು ಒಳಗೊಂಡಿದೆ, ಇದು 8,500 ಆರ್ಪಿಎಂನಲ್ಲಿ 513 ಹಾರ್ಸ್ ಪವರ್ ಗರಿಷ್ಠ ಶಕ್ತಿಯ ಉತ್ಪಾದನೆ ಮಾಡುತ್ತದೆ.
ಎಫ್50 ಕಾರು ಚಾಲನೆಯಾದ ಕೇವಲ 3.6 ಸೆಕೆಂಡುಗಳಲ್ಲಿ 100 ಕಿಮೀ ಪ್ರತಿ ಗಂಟೆಯ ಲೆಕ್ಕದಲ್ಲಿ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ.
ಬಾಕ್ಸರ್ ಟೈಸನ್ನ ಅತ್ಯಂತ ಜನಪ್ರಿಯ ಕಾರು ಖರೀದಿಗಳಲ್ಲಿ ಲಂಬೋರ್ಗಿನಿ, ಫೆರಾರಿ ಮತ್ತು ಬೆಂಟ್ಲಿ ಸೇರಿವೆ.