
ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ದೇಶವು ನಿರಾಳವಾಗಿದ್ದು ಆದರೆ ಅಕ್ಟೋಬರ್ 30ರಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,156 ಪ್ರಕರಣ ದಾಖಲಾಗಿದೆ. ಇದರಿಂದ ಮುನ್ನೆಚ್ಚರಿಕಾ ಕ್ರಮದ ಅಗತ್ಯವಿದೆ ಎಂದು ಅರಿತ ಕೇಂದ್ರ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ʼಕೋವ್ಯಾಕ್ಸಿನ್ʼ ಲಸಿಕೆ ಪಡೆದವರು ಯಾವೆಲ್ಲಾ ದೇಶಗಳಿಗೆ ಹೋಗಬಹುದು ಗೊತ್ತಾ..? ಇಲ್ಲಿದೆ ಈ ಕುರಿತ ಮಾಹಿತಿ
ಕೊರೊನಾ ಮೊದಲ ಅಲೆಯು ನಿಯಂತ್ರಣಕ್ಕೆ ಬಂದ ಬಳಿಕ ಜನತೆ ಸೋಂಕಿನ ಅರಿವೇ ಇಲ್ಲದಂತೆ ವರ್ತಿಸಿದ ಪರಿಣಾಮ ಕೊರೊನಾ 2ನೇ ಅಲೆಯು ದೊಡ್ಡ ಹೊಡೆತವನ್ನೇ ನೀಡಿತ್ತು. ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಔಷಧಿಗಳ ಕೊರತೆ ಹಾಗೂ ಲಸಿಕೆಗಳ ಕೊರತೆಯಿಂದಾಗಿ ಅನೇಕರು ಜೀವ ತೆತ್ತಿದ್ದರು.
ಕೊರೊನಾ 2ನೇ ಅಲೆಯಿಂದ ಹೇಗೋ ಸುಧಾರಿಸಿಕೊಂಡಿರುವ ಭಾರತ ಕಳೆದ ಅನೇಕ ದಿನಗಳಿಂದ ಕಡಿಮೆ ಸೋಂಕನ್ನು ವರದಿ ಮಾಡುತ್ತಿತ್ತು. ಆದರೆ ಇದೀಗ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತಿದೆ. ಕೊರೊನಾ ಮೂರನೇ ಅಲೆಯನ್ನು ತಡೆಯುವ ಸಲುವಾಗಿ ಈಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಗೃಹ ವ್ಯವಹಾರಗಳ ಸಚಿವಾಲಯ ಕೋವಿಡ್ 19 ಮಾರ್ಗಸೂಚಿಗಳನ್ನು ವಿಸ್ತರಿಸಿದೆ.