ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ನವಾಡದ ಭಗತ್ ಸಿಂಗ್ ಚೌಕದಲ್ಲಿ ಈ ಹುಡುಗಿ ತನ್ನ ಪೋಷಕರೊಂದಿಗೆ ಹೋಗುತ್ತಿದ್ದ ವೇಳೆ ಈಕೆಗೆ ಮದುವೆ ನಿಶ್ಚಯವಾಗಿದ್ದ ವರ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ಆಕೆ ಅವನ ಬೆನ್ನತ್ತಿ ಮದುವೆ ಆಗುವಂತೆ ಪೀಡಿಸಿದ್ದು, ಒಂದು ಹಂತದಲ್ಲಿ ಕೈ ಹಿಡಿದು ಎಳೆದಿದ್ದಾಳೆ. ಹುಡುಗ ಓಡಿ ಹೋಗಲು ಯತ್ನಿಸಿದರೂ ಆಕೆ ಬಿಟ್ಟಿಲ್ಲ.
ಇವರ ಮದುವೆ ಮೊದಲೇ ನಿಶ್ಚಯವಾಗಿದ್ದು, ಆದರೆ ವರ ಕುಂಟು ನೆಪಗಳನ್ನು ಹೇಳಿಕೊಂಡು ಮದುವೆಯನ್ನು ಮುಂದೂಡುತ್ತಲೇ ಇದ್ದ ಎನ್ನಲಾಗಿದೆ. ಹೀಗಾಗಿ ಹುಡುಗಿ ಮದುವೆಯಾಗುವಂತೆ ಬೆನ್ನು ಬಿದ್ದಿದ್ದು, ಆಕೆ ಪೋಷಕರೂ ಇದಕ್ಕೆ ಸಾಥ್ ನೀಡಿದ್ದಾರೆ. ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ಈ ಘಟನೆಯಿಂದ ಸಾರ್ವಜನಿಕರು ಶಾಕ್ ಆಗಿದ್ದಾರೆ.