alex Certify ಪ್ರಧಾನಿ ಮೋದಿ ಮುಖದ ಕೆತ್ತನೆ ಇರುವ ವಜ್ರ ಉಡುಗೊರೆ ನೀಡಿದ ವ್ಯಾಪಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಮುಖದ ಕೆತ್ತನೆ ಇರುವ ವಜ್ರ ಉಡುಗೊರೆ ನೀಡಿದ ವ್ಯಾಪಾರಿ

ಅಹಮದಾಬಾದ್‌: ದೇಶದ ನಾಯಕನಿಗೆ ಉಡುಗೊರೆಗಳು ಸಿಗುವುದು ಹೊಸದೇನಲ್ಲ. ತರಹೇವಾರಿ ಉಡುಗೊರೆಗಳು ನಿತ್ಯವೂ ಸಿಗುತ್ತಿರುತ್ತವೆ. ಆದರೆ ಎಲ್ಲವೂ ಗಮನ ಸೆಳೆಯುವುದಿಲ್ಲ. ಈಗ ಸುದ್ದಿಯಲ್ಲಿರುವ ಉಡುಗೊರೆ ಒಂದು “ವಜ್ರ” !

ಇದರ ವಿಶೇಷತೆ ಏನು? ವಜ್ರದ ಮೇಲೆ ಪ್ರಧಾನಿ ಮೋದಿಯವರ ಮುಖವನ್ನು ಕೆತ್ತಲಾಗಿದೆ. ಇದೇ ಕಾರಣಕ್ಕೆ ಈ ಉಡುಗೊರೆ ದೇಶದ ಗಮನಸೆಳೆದಿದೆ. ಸೂರತ್‌ನ ವಜ್ರದ ವ್ಯಾಪಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರದೇ ಮುಖವನ್ನು ಕೆತ್ತಿದ ಭಾರತದ ನಕ್ಷೆಯ ಆಕಾರದ ವಜ್ರವನ್ನು ಉಡುಗೊರೆಯಾಗಿ ನೀಡಿದರು.

BIG NEWS: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು

ಗುಜರಾತ್‌ನ ಸೌರಾಷ್ಟ್ರ ಮೂಲದ ಉದ್ಯಮಿ ಕೆಯೂರ್‌ ಮಿಯಾನಿ ಈ ವಿಶಿಷ್ಟ ಉಡುಗೊರೆ ನೀಡಿದವರು. ಈ ವಜ್ರ 1.46 ಕ್ಯಾರೆಟ್‌ನದ್ದಾಗಿದ್ದು, 14 ಎಂಎಂ ಎತ್ತರ, 12.08 ಉದ್ದ, 22 ಎಂಎಂ ದಪ್ಪವಿದೆ.

“ನಮ್ಮ ಸಂಬಂಧಿಕರೊಬ್ಬರು 1998ರಲ್ಲಿ ಕಚ್ಚಾ ವಜ್ರವನ್ನು ಪತ್ತೆ ಮಾಡಿದರು. ನಾವು ಅದನ್ನು 2013ರಲ್ಲಿ 4.5 ಲಕ್ಷ ರೂಪಾಯಿಗೆ ಖರೀದಿಸಿದೆವು. ಅದೇ ವಜ್ರದ ಮೇಲೆ ಪ್ರಧಾನಿ ಮೋದಿಯವರ ಮುಖವನ್ನು ಕೆತ್ತಿದೆವು” ಎಂದು ಮಿಯಾನಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...